ಗುಮ್ಮಟ ನಗರಿ ವಿಜಯಪುರದಲ್ಲಿ ಧಾರಾಕಾರ ಮಳೆ
ವಿಜಯಪುರ,ಮೇ.17: ಗುಮ್ಮಟ ನಗರದಲ್ಲಿ ಗುರುವಾರ ಮಧ್ಯಾಹ್ನ ಹಾಗೂ ರಾತ್ರಿ ಕೆಲ ಹೊತ್ತು ಧಾರಾಕಾರ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.
ಬೆಳಗ್ಗೆಯಿಂದ ಮೋಡ, ಬಿಸಿಲು ಇತ್ತಾದರೂ ಮಧ್ಯಾಹ್ನದ ಬಳಿಕ ದಟ್ಟ ಮೋಡ ಕವಿದು ರಾತ್ರಿ 9 ಸುಮಾರು ಮಳೆ ಆರಂಭವಾಗಿ ರಾತ್ರಿ ಬಹಳ ಹೊತ್ತಿನವರೆಗೆ ಧಾರಾಕಾರ ಮಳೆ ಸುರಿದಿದೆ.
ರಾತ್ರಿ ಸುರಿದ ಮಳೆಗೆ ರಸ್ತೆಯಲ್ಲಿ ಮಳೆ ನೀರು ಮಡುಗಟ್ಟಿ ನಿಲ್ಲುವುದರ ಜೊತೆಗೆ ತಗ್ಗು ಪ್ರದೇಶದ ಭಾಗದಲ್ಲೂ ಜಲಾವೃತವಾಗಿತ್ತು. ರಾತ್ರಿ ವೇಳೆ ಧಾರಾಕಾರ ಸುರಿದ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡು, ಕೆಲ ಗಂಟೆ ಕಾಲ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯುವಂತಾಯಿತು.