ಮೂಲಭೂತ ಸೌಕರ್ಯ ಒದಗಿಸಲು ಆಯುಕ್ತರಿಗೆ ಮನವಿ
ಕಲಬುರ್ಗಿ, ಮೇ,17: ಕಲಬುರಗಿ ನಗರದ ವಾರ್ಡ್ ಸಂಖ್ಯೆ 7 ರ ಸವಿತಾ ಕಾಲೋನಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಒಳಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದ್ದು ದುರ್ವಾಸನೆಯಿಂದ ಕಾಲೋನಿಯ ನಿವಾಸಿಗಳು ಅನಾರೋಗ್ಯದಿಂದ ಬಳಲುತ್ತಿರುವ ಕುರಿತು ಹಲವಾರು ವರ್ಷಗಳಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮಹಾನಗರ ಪಾಲಿಕೆ ಸದಸ್ಯರಿಗೆ ಮನವಿ ಸಲ್ಲಿಸಿದರು ಸ್ಪಂದಿಸುತ್ತಿರಲಿಲ್ಲ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರದಲ್ಲೇ ತಾತ್ಕಾಲಿಕ ವ್ಯವಸ್ಥೆ ಮಾಡಲು ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ಪಾಟೀಲ ಅವರಿಗೆ ಒತ್ತಡ ಹಾಕಲಾಯಿತು. ಸ್ಪಂದಿಸಿದ ಆಯುಕ್ತರು ಅಧಿಕಾರಿಗಳಿಗೆ ಕರೆ ಮಾಡಿ ಸ್ಥಳ ಪರಿಶೀಲಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲು ತಿಳಿಸಿದರು ಇದೆ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಜ್ಯೋತಿ ಅಡಿಕೆ ಹಿರಿಯರಾದ ಮದನ ಗದವಾಲ,ಸಂಜು ಹಕೀಂ,ರವಿ ತಾಂಡೂರ , ಶಶಿಕಾಂತ,ನರೇಶ್ ಜುಟಪಲ್ಲಿ,ಪವನ, ದಶರಥ ಕೋಟನೂರ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು