ರಾಜ್ಯದಲ್ಲಿ ದಿನಕ್ಕೊಂದು ಕೊಲೆ: ರಾಷ್ಟ್ರಪತಿ ಆಳ್ವಿಕೆಗೆ ಠಾಕೂರ್ ಆಗ್ರಹ
ಬೀದರ್:ಮೇ.17: ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಬಿಜೆಪಿ ಕಲಬುರಗಿ ವಿಭಾಗಿಯ ಸಹ ಪ್ರಭಾರಿ ಈಶ್ವರ್ ಸಿಂಗ್ ಠಾಕೂರ್ ಆಗ್ರಹಿಸಿದರು.
ಈ ಕುರಿತು ಪ್ರಕಟಣೆ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ದಿನಕ್ಕೊಂದು ಕೊಲೆ, ಅದರಲ್ಲೂ ಹಿಂದೂ ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯ, ಕೊಲೆ, ಅತ್ಯಾಚಾರ ಹೀಗೆ ಮುಂದುವರೆದಿದ್ದು ರಾಜ್ಯ ಸರ್ಕಾರ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ತುಷ್ಟಿಕರಣ ರಾಜಕಾರಣ ಮಾಡುತ್ತಿರುವುದರಿಂದಲೇ ಮತಿಯ ಶಕ್ತಿಗಳು ತಲೆ ಎತ್ತುತ್ತಿವೆ. ಅವರಿಗೆ ಕಾನೂನು ಭಯವೆ ಇಲ್ಲದಾಗಿದೆ. ಸರಕಾರ ಪೆÇೀಲಿಸರಿಗೆ ಸ್ವತಂತ್ರ ಅಧಿಕಾರ ನೀಡದ ಹಿನ್ನಲೆಯಲ್ಲಿ ಹಿಂದು ಹೆಣ್ಣು ಮಕ್ಕಳ ಮೇಲಿನ ಕೊಲೆ ಕೇಸ್ ಗಳಿಗೆ ವೇಗ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬಾಲ ಮುದುಡಿಕೊಂಡಿದ್ದ ಮತಿಯ ಸಂಘಟನೆಗಳು ಈಗ ರಾಜಾ ರೋಷವಾಗಿ ಮೆರೆಯುತ್ತಿವೆ. ಇದು ಹೀಗೆ ಮುಂದುವರೆದರೆ ಬಿಹಾರ ಸಂಸ್ಕ್ರತಿ ಉದ್ಭವಿಸುವ ಕಾಲ ದೂರವಿಲ್ಲ. ಒಂದು ಕಾಲದಲ್ಲಿ ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮಳ ತಾಣ. ಅಂಥದರಲ್ಲಿ ಚನ್ನಮ್ಮಳ ವಂಶಜರಾದ ಹೆಣ್ಣು ಮಕ್ಕಳ ಕೊಲೆ ಹಾಡಹಗಲೆ ನಡೆಯುತ್ತಿದೆ. ಇತ್ತಿಚೀಗೆ ನೇಹಾ ಹಿರೇಮಠ ಅವರ ಹಾಡಹಗಲೆ ಬರ್ಬರ ಕೊಲೆ ನಡೆದ ಬೆನ್ನಲ್ಲೆ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ನೆತ್ತರು ಹರಿದಿದೆ. ಅಂಜಲಿ ಅಂಬಿಗಾರ ಎಂಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ವೀರಾಪುರದಲ್ಲಿ ಅಂಜಲಿಯನ್ನು ಗಿರೀಶ ಸಾವಂತ ಎನ್ನುವ ಆಟೊ ಚಾಲಕ ಹತ್ಯೆ ಮಾಡಿರುವನು. ಹೀಗೆ ನಿರಂತರ ನಾರಿಶಕ್ತಿ ಕುಂದುತ್ತ ಹೋದರೆ ಅವರ ಆತ್ಮಬಲ ಕಡಿಮೆಯಾಗುತ್ತದೆ. ಹೆಣ್ಣು ಮಕ್ಕಳ ಮೇಲಿನ ಎಲ್ಲ ಕೇಸ್ ಗಳನ್ನು ಸಿಬಿಐಗೆ ಕೊಡಿ ಇಲ್ಲವೇ ಎನ್.ಐ.ಎ ಒಪ್ಪಿಸಿ ಇದರಿಂದ ಅಸಲಿ ಸತ್ಯೆ ಹೊರಬರಲಿದೆ ಎಂದು ಜರಿದಿರುವರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುವಲ್ಲಿ ವಿಫಲವಾದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ರಾಜ್ಯಪಾಲರು ಕೂಡಲೇ ಕಿತ್ತೆಸೆದು ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಠಾಕೂರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.