ಆದಿ ಶಂಕರಾಚಾರ್ಯರ ಜಯಂತಿಗೆ ಗೈರು: ಬ್ರಾಹ್ಮಣ ಸಮಾಜ ದೂರು
ಆಳಂದ:ಮೇ.17: ತಾಲೂಕು ಆಡಳಿತ ಸೌಧನಲ್ಲಿ ಮೇ 12ರಂದು ಆಚರಿಸಬೇಕಿದ್ದ ಆದಿ ಜಗದ್ಗುರು ಗುರು ಶಂಕರಾಚಾರ್ಯರ ಜಯಂತಿ ಆಚರಣೆಗೆ ಅಧಿಕಾರಿಗಳು ಗೈರಾಗುವ ಮೂಲಕ ಗುರುಗಳಿಗೆ ಅವಮಾನಿಸಿದ್ದಾರೆ ಕ್ರಮ ಜರುಗಿಸಬೇಕು ಎಂದು ತಾಲೂಕು ಬ್ರಾಹ್ಮಣ ಸಮಾಜ ಮುಖಂಡರು ತಹಸೀಲ್ದಾರರಿಗೆ ದೂರು ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಸಮಾಜದ ಮುಖಂಡರು ಜಮಾಯಿಸಿ ಈ ಕುರಿತು ತಹಸೀಲ್ದಾರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಅವರ ಪರ ಶಿರಸ್ತೆದಾರ ರಾಕೇಶ ಶೀಲವಂತ ಮೂಲಕ ದೂರು ಸಲ್ಲಿಸಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಮಾಜ ಅಧ್ಯಕ್ಷ ವಿಜಯಕುಮಾರ ಕೋಥಳಿಕರ್ ಅವರು ಮಾತನಾಡಿ,
ಮಹಾನ ನಾಯಕರನ್ನು ತತ್ವದಾರ್ಶಗಳನ್ನು ಎಲ್ಲರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಮಹಾತ್ಮರ ಜಯಂತಿ ಆಚರಿಸುತ್ತಿದ್ದೆ ಆದರೆ ಮೇ 12 ರಂದು ಶ್ರೀ ಆದಿ ಗುರು ಶಂಕರಾಚಾರ್ಯರ ಜಯಂತಿಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುವ ಮೂಲಕ ಅವಮಾನಿಸಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಯೊಂದು ಜಯಂತಿಗೆ ಆಯಾ ಸಮಾಜದವರಿಗೆ ಕರೆಸಿ ಪೂರ್ವ ಸಿದ್ಧತೆ ಮಾಡುತ್ತಾರೆ. ಆದರೆ ಈ ಸಲ ಪೂರ್ವ ಸಿದ್ಧತೆ ಬ್ರಾಹ್ಮಣ ಸಮಾಜದವರಿಗೆ ಸಭೆಯನ್ನು ಕರೆದಿಲ್ಲ, ಜಿಲ್ಲೆ ಬೇರೆ ತಾಲ್ಲೂಕುಗಳಲ್ಲಿ ಅಧಿಕಾರಿಗಳು ಹಾಜರು ಆಗುವ ಮೂಲಕ ಗೌರವ ತೋರಿಸಿದ್ದಾರೆ. ಇಲ್ಲಿಯ ಅಧಿಕಾರಿಗಳು ಚುನಾವಣೆ ನೆಪ ಹೇಳಿ ಜಯಂತಿಗೆ ಅಗೌರವ ತೋರಿಸಿದ್ದಾರೆ. ಈ ವಿಷಯ ಕುರಿತು ಜಿಲ್ಲಾ ಬ್ರಾಹ್ಮಣ ಸಮಾಜದವರು ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ದೂರು ಕೊಡಲು ಒತ್ತಾಯಿಸುತ್ತಿದ್ದರು, ಇಲ್ಲಿಯ ಅಧಿಕಾರಿಗಳ ತಪ್ಪಿಗೆÀ ಈ ಒಂದು ಸಲ ಅವಕಾಶ ಕೊಡೋಣ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು.
ಮನವಿ ಸ್ವೀಕರಿಸಿದ ಶಿರಸ್ತೇದಾರ ರಾಕೇಶ ಶೀಲವಂತ ಮಾತನಾಡಿ ನಿಲ್ರ್ಯಕ್ಷ ತೋರಿದ ಅಧಿಕಾರಿಗಳ ವಿರುದ್ಧ ತಹಶೀಲ್ದಾರರು ಕ್ರಮಕೈಗೊಳ್ಳುತ್ತಾರೆ ಎಂದರು.
ಸಮಾಜ ಮುಖಂಡರಾದ ಕಿಶೋರ ಸಂಗೋಳಗಿಕರ, ತಾತ್ಯೆರಾವ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಕಿಶೋರ ದೇಶಪಾಂಡೆ, ಗುಂಡೇರಾವ ಮಾಡಿಯಾಳಕರ, ಭೀಮಾಶಂಕರ ರಾಜೋಳಕರ, ವಿಲಾಸ ಪೋತನ್ನಿಸ, ಮೋಹನರಾವ ಕುಲಕರ್ಣಿ, ಅವಧೂತ ಕುಲಕರ್ಣಿ, ಅರುಣ ಜೋಶಿ, ಜಯವಂತ ಕುಲಕರ್ಣಿ, ಸಂದೀಪ ದೇಶಪಾಂಡೆ, ಅನೀಲಕುಮಾರ ಪಾಟೀಲ್, ಮಂಜುನಾಥ ಕುಲಕರ್ಣಿ, ಅನುಪಮಾ ಕುಲಕರ್ಣಿ, ಮಾಧುರಿ ಕುಲಕರ್ಣಿ, ಪದ್ಮಾ ಜೋಶಿ, ಗೀತಾ ಮುಜುಮದಾರ, ರತೀಕಾ ರಾಜೋಳಕರ, ಗಿರಿಜಾ ಮೋಘೆಕರ, ವೀಣಾ ದಿಕ್ಷೀತ , ಮಂಗಲಾ ಆರಾಧ್ಯ, ಕಲಾವತಿ ರಾಜೋಳಕರ, ಶಶಿಕಲಾ ತಳಿಕೇಡ, ನಿರ್ಮಲಾ ಮಟಕಿಕರ, ಗೀತಾ ಹೋದಲೂಕರ, ಅರುಣಾ ಹೋದಲೂರಕರ, ಭಾಗ್ಯಶ್ರೀ ಚಿಟ್ಟಗೂಪಕರ ಇದ್ದರು.