ದಿಗಂಬರ ಕರಿಬಸವೇಶ್ವರರು ಮಹಾನ ಪವಾಡ ಪುರುಷರು: ಡಾ ಚನ್ನವೀರ ಶಿವಾಚಾರ್ಯರು
ಹುಮನಾಬಾದ:ಮೇ.17: ದಿಗಂಬರ ಕರಿಬಸವೇಶ್ವರರು ನೆಲೆದಾಡಿರುವ ಪವಿತ್ರ ಪುಣ್ಯಭೂಮಿ ಹುಡಗಿ ಗ್ರಾಮವಾಗಿದೆ ಎಂದು ಡಾ. ಚನ್ನವೀರ ಶಿವಾಚಾರ್ಯ ತಾಲೂಕಿನ ಹುಡಗಿ ಶ್ರೀ ಕರಿಬಸವೇಶ್ವರ ಮಂದಿರದ ಗೋಪುರದ ಕಳಸಾರೋಹಣ ಹಾಗೂ ಪುರಾಣಮಂಗಲೋತ್ಸವ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು. ಪವಾಡ ಪುರುಷರಾಗಿದ್ದರು ಭಕ್ತರಿಗೆ ಬೇಡಿದ ವರ ನೀಡುವ ದೇವರಾಗಿದ್ದರು. ಕರಿಬಸವೇಶ್ವರ ಮೇಲೆ ಭಕ್ತಿಯಿಂದ ಪ್ರಾರ್ಥಿಸಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತವೆ ಎಂದು ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದರು ಕರಿಬಸವೇಶ್ವರ ಮಠದ ಪೂಜ್ಯ ವಿರುಪಾಕ್ಷ ಶಿವಾಚಾರ್ಯರು ಅತ್ಯುತ್ತಮವಾಗಿ ಶ್ರೀ ಮಠ ಮುನ್ನಡೆಸುತ್ತಾ ಧಾರ್ಮಿಕ ಶೈಕ್ಷಣಿಕ ಸೇವೆಯು ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಧಾರ್ಮಿಕ ಸೇವೆ ಮಾಡುತ್ತಾ ಭಕ್ತರ ಹೃದಯ ಗೆದ್ದಿದ್ದಾರೆ. ಶತಾಯುಷಿಗಳಾಗಿರುವ ಪೂಜ್ಯರು ಇವರು ಮಾಡುತ್ತಿರುವ ಸೇವೆ ನಾವೆಲ್ಲ ಮೆಚ್ಚುವಂತದ್ದಾಗಿದೆ. ವಿರುಪಾಕ್ಷ ಶಿವಾಚಾರ್ಯ ಮೇಲೆ ಕರಿಬಸವೇಶ್ವರರ ಮೇಲೆ ಭಕ್ತಿ ಇಟ್ಟರೆ ಭಕ್ತರ ಕಾರ್ಯ ಸಿದ್ದಿಯಾಗುತ್ತವೆ. ವಿರುಪಾಕ್ಷ ಶಿವಾಚಾರ್ಯರ ಅಮೃತ ಹಸ್ತದಿಂದಲೆ ನನ್ನ ಪಟ್ಟಾಭಿಷೇಕ ಜರುಗಿದೆ ಎಂದು ಸ್ಮರಿಸಿದರು.ಕಳಸರೋಹಣ ಅಂಗವಾಗಿ ಒಂದು ವಾರ ಜರುಗಿದ ಪೂರಾಣವನ್ನು ಹಲಬರಗಾ ಶಿವಣಿ ಮಠದ ಹಾವಗಿ ಲಿಂಗೇಶ್ವರ ಶಿವಾಚಾರ್ಯರು ಪುರಾಣ ಮಂಗಲ ಮಾಡಿದರು. ಈ ಸಂದರ್ಭದಲ್ಲಿ ಪೂಜ್ಯರು ಚಿನ್ನದ ಉಂಗುರ ತೊಡಿಸಿ ವಿರುಪಾಕ್ಷ ಶಿವಾಚಾರ್ಯರಿಗೆ ಸನ್ಮಾನಿಸಿದರು. ತಡೋಳ ಮಠದ ರಾಜೇಶ್ವರ ಶಿವಾಚಾರ್ಯರು, ಕಲ್ಲೂರ ಮೃತ್ಯುಂಜಯ ಶಿವಾಚಾರ್ಯ, ರಾಜೇಶ್ವರದ ಘನಲಿಂಗ ರುಧ್ರಮುನಿ ಶಿವಾಚಾರ್ಯ. ತ್ರಿಪುರಾಂತ ಮಠದ ಅಭಿನವ ಘನಲಿಂಗ ರುಧ್ರಮುನಿ ಶಿವಾಚಾರ್ಯ, ಮಳಖೇಡದ ಶ್ರೀಗಳು, ಸದ್ಲಾಪೂರದ ಸಿದ್ದಲಿಂಗ ಶಿವಾಚಾರ್ಯರು, ಬಬಲಾದ ಶ್ರೀಗಳು ಆಶಿರ್ವಚನ ನೀಡಿದರು. ಶಿವಕುಮಾರ ಸಂತೋಷ ಕಾವಡಿ ಇವರಿಂದ ವಿಶೇಷ ದಾಸೋಹ ಜರುಗಿತು. ಜಾತ್ರ ಮಹೋತ್ಸವದ ಅಧ್ಯಕ್ಷ ಅನೀಲಕುಮಾರ ನಂದಿ, ಕಾಶಿನಾಥ ಸೂಸೈಟಿ, ರೈತ ಸಂಘದ ಮುಖಂಡ ಕರಬಸಪ್ಪ. ಅರ್ಚಕರಾದ ಮಹಾದೇವ ಉಪಸ್ಥಿತರಿದ್ದರು. ದಯಾನಂದ ಸಿಂದನಕೇರಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.