ಗಂಡಬೊಮ್ಮನಹಳ್ಳಿ ಗೋಶಾಲೆಗೆ ಹೊಸಪೇಟೆ ಎಸಿ ಭೇಟಿ, ಪರಿಶೀಲನೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.17 :- ತಾಲೂಕಿನ ಗಂಡಬೊಮ್ಮನಹಳ್ಳಿ ಬಳಿ ಇರುವ ಗೋಶಾಲೆಗೆ ಹೊಸಪೇಟೆ ಉಪ ವಿಭಾಗಾಧಿಕಾರಿ ನೊಂಗ್ಡಾಯ್ ಮಹಮ್ಮದ್ ಅಕ್ರಂ ಅಲಿ ಶಾ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಗೋಶಾಲೆಗೆ ಪೂರೈಕೆಯಾಗುವ ಮೇವಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ, ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ಮೇವು, ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ರೈತರು ಹಾಗೂ ಜಾನುವಾರು ಸಾಕಣೆದಾರರೊಂದಿಗೆ ಮಾತನಾಡಿದ ಎಸಿ ಅಕ್ರಂ ಅಲಿ ಶಾ ಅವರು ಜಾನುವಾರುಗಳಿಗೆ ಮೇವು ನೀಡುವುದರಲ್ಲಿ ಏನಾದರೂ ತೊಂದರೆಯಾಗಿಯಾ? ಎಂದು ಪ್ರಶ್ನಿಸಿದರು. ಆಗ, ಮೇವು, ನೀರಿಗೆ ಯಾವುದೇ ತೊಂದರೆ ಇಲ್ಲ. ಬಿಸಿಲಿಗೆ ಜಾನುವಾರುಗಳು ಇರುತ್ತಿದ್ದವು. ಈಗ, ಐದು ಶೆಡ್‌ಗಳನ್ನು ಹಾಕಿರುವುದರಿಂದ ಜಾನುವಾರುಗಳಿಗೆ ನೆರಳು ಸಿಕ್ಕಂತಾಗಿದೆ ಎಂದು ಅನೇಕರು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜು ಪಿರಂಗಿ, ತಾಪಂ ಇಒ ವೈ.ರವಿಕುಮಾರ್, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಲೋಹಿತ್ ಕುಮಾರ, ಉಪ ತಹಸೀಲ್ದಾರ್ ಕೊಟ್ರಮ್ಮ, ಕಂದಾಯ ನಿರೀಕ್ಷಕ ಚೌಡಪ್ಪ, ಗ್ರಾಮ ಆಡಳಿತಾಧಿಕಾರಿಗಳಾದ ಯಶ್ವಂತ್, ವೀರೇಶ್ ಸೇರಿ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.