ಆಟ ಆಡಿಸುವುದರಿಂದ ಮಕ್ಕಳು ದೈಹಿಕ ಸದೃಢತೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.17: ಆಟ ಆಡಿಸುವುದರಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ ಜೊತೆಗೆ ಶಾಲೆಗೆ ಸಂತಸದಿಂದ ಬರುತ್ತಾರೆ ಎಂದು ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಹಿಮೂರ್ ರಹಮಾನ್ ಹೇಳಿದರು.
ಇಂದು ಅವರು ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನ ಬಿಸಿಯೂಟಕ್ಕೆ ಹಾಜರಾದ ಮಕ್ಕಳೊಂದಿಗೆ ಸೇರಿ ಆಟವಾಡಿಸಿ,ಮಕ್ಕಳಿಂದ ಹಿಮ್ಮಾಹಿತಿ ಪಡೆದು ಮೇಲಿನಂತೆ ಹೇಳಿದರು.
ಬಿಸಿಯೂಟಕ್ಕೆ ಸಂಬಂಧಿಸಿದಂತೆ ದಾಖಲೆ ಪರಿಶೀಲಿಸಿದ ಅವರು ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿಯನ್ನು ಪ್ರಶಂಸಿದರು.
ಶಾಲೆಯ ಭೌತಿಕ ಸ್ವಚ್ಛತೆ, ಸುಣ್ಣ ಬಣ್ಣ, ಶಾಲಾ ದುರಸ್ತಿ ಪರಿಶೀಲಿಸಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆ ಪ್ರಾರಂಭದ ಹೊತ್ತಿಗೆ ಮಕ್ಕಳಿಗೆ ಅವಶ್ಯಕವಾದ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕೆಂದು ಹೇಳಿದರು.
ಮುಖ್ಯಗುರುಗಳಾದ ರವಿಚೇಳ್ಳಗುರ್ಕಿ, ಚಾಲಕ ರಾಜ,ಶಾಲೆಯ ಅಡುಗೆ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.