ಸಾವುಗಳ ತನಿಖೆಗೆ ಆಗ್ರಹಿಸಿ ಜಿಂದಾಲ್ ಕಾರ್ಖಾನೆ ವಿರುದ್ದವಿವಿಧ ಸಂಘಟನೆಗಳಿಂದ ಮೇ 20 ಪ್ರತಿಭಟನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.17: ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಕಾರ್ಮಿಕರ ಹಕ್ಕುಗಳ ಧಮನ ನಡೆಯುತ್ತಿದೆ. ಇತ್ತೀಚೆಗೆ ಕಾರ್ಖಾನೆಯಲ್ಲಿ ಮೂರು ಜನರು ಸುರಕ್ಷತೆ ಇಲ್ಲದೆ ಸಾವನ್ನಪ್ಪಿದ ಘಟನೆ ಸೇರಿದಂತೆ ಕಾರ್ಖಾನೆಯಲ್ಲಿನ ಸಾವುಗಳನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ಅಲ್ಲದೆ ಮೃತರ ಕುಟುಂಬಕ್ಕೆ  ಸೂಕ್ತ ಪರಿಹಾರ ನೀಡಬೇಕೆಂದು ಸಿಐಟಿಯು, ರೈತ, ಮಹಿಳಾ, ದಲಿತ, ಯುವಜನ, ವಿದ್ಯಾರ್ಥಿಗಳ ಸಂಘಟನೆಗಳು ಜಂಟಿಯಾಗಿ ಮೇ 20 ರಂದು ಕಾರ್ಖಾನೆಯ ಹಳೇ ಗೇಟಿನ‌ಮುಂದೆ ಪ್ರತಿಭಟನೆ ನಡೆಸಲಿದೆಂದು  ಸಿಐಟಿಯುನ
ಜಿಲ್ಲಾ ಉಪಾಧ್ಯಕ್ಷ ಜೆ. ಸತ್ಯಬಾಬು ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ. ಇತ್ತೀಚೆಗೆ ತಕ್ಷಣ ನೀರು ಬಂದು ಮೂರು ಜನ ಸುರಕ್ಷತೆ ಇಲ್ಲದೆ ಸತ್ತರು. ಅವರಿಗೆ ತಲಾ ಅಂದಾಜು 32 ಲಕ್ಷ ರೂ ಪರಿಹಾರ ನೀಡಲಿದ್ದಾರಂತೆ. ಆದರೆ ಒಂದು ಕೋಟಿ ರೂ ಪರಿಹಾರ ಕೊಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.
ಇಲ್ಲಿನ ಅನೇಕ ಅಪಘಾತಗಳು ಬೆಳಕಿಗೆ ಬರುವುದಿಲ್ಲ. ಕಾಮೀಕರಿಗೆ ಸುರಕ್ಷತೆ ಇಲ್ಲದಾಗಿದೆ ಜೀವ ಭಯದ ಅತಂಕದಲ್ಲಿರುವ ಕಾರ್ಮಿಕರಿಗೆ ಕಳೆದ ಗುರುವಾರ ಮೇ 09 2024ರಂದು ನಡೆದ ಭೀಕರ ಅಪಘಾತ ಜನರಲ್ಲಿ ಭಯ-ಭೀತಿಗೊಳಿಸಿದೆ.
ಭುವನಹಳ್ಳಿ ಗ್ರಾಮದ ಗಂಟೆ ಜಡೆಪ್ಪ (31) ಚೆನ್ನನ ಶಿವ ಮಹದೇವ್ (22) ಬೆಂಗಳೂರಿನ ಸುಶಾಂತ್ ಕೃಷ್ಣ ನೈನಾರು (31) ಎಂಬ ಯುವ ನೌಕರರು ಮೃತರಾಗಿದ್ದಾರೆ.
ಕಾರ್ಮಿಕ ಸುರಕ್ಷತೆ ಕಾಯ್ದೆಗಳು ಹಾಗೂ ಕಾರ್ಖಾನಗಳ ಕಾಯ್ದೆ 1948 ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ.
ಸರ್ಕಾರವು ಕೈಗಾರಿಕೆಗಳ ಅಪಘಾತಗಳನ್ನು ತಡೆಯುವಲ್ಲಿ ಗಂಭೀರ ಲೋಪ ಎಸಗಿದೆ ಇದುವರೆಗೆ ನಡೆದ ಅಪಘಾತಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಸಂಬಂಧಿಸಿದಂತೆ ಇಲಾಖೆಯ ಮುಖ್ಯಸ್ಥರು ಹಾಗೂ ಕೈಗಾರಿಕೆ ಆಡಳಿತ ಮಂಡಳಿಯ ಅಧ್ಯಕ್ಷತೆ ಪಿ.ಕೆ ಮುರಘನ್, ಹೆಚ್ಆರ್ ಉಪಾಧ್ಯಕ್ಷ ಸಂಜಯ್ ಹೊಂಡರವರನ್ನು ಎಫ್ ಐ ಆರ್ ನಲ್ಲಿ ಸೇರಿಸಿ ಕಾನೂನು ಕ್ರಮಗಳನ್ನು ಕೈಗೊಂಡು ತಪ್ಪಿ ತಸ್ಥರನ್ನು ಶಿಕ್ಷಿಸಬೇಕು ಎಂದರು.
ಸಾವನ್ನಪ್ಪಿದ  ಕುಟುಂಬಗಳಿಗೆ ಉದ್ಯೋಗ, ಪರಿಹಾರ ನೀಡಲು ಒತ್ತಾಯಿಸಿ ನಡೆಯುವ ಪ್ರತಿಭಟನೆಗೆ  ಬೆಂಬಲಿಸಲು ಕೋರಿದರು.
ಸುದ್ದಿಗೋಷ್ಟಿಯಲ್ಲಿ ವಿ.ಎಸ್. ಶಿವಶಂಕರ್, ಚೆನ್ನಬಸಯ್ಯ, ಸೋಮಪ್ಪ, ಚಂದ್ರಕುಮಾರಿ, ತಿಪ್ಪೇಸ್ವಾಮಿ, ರಾಣಿ ಎಲೆಜಬೆತ್ ಮೊದಲಾದವರು ಇದ್ದರು.
ಕಾರ್ಮಿಕ ಸಚಿವರ ನಿರ್ಲಕ್ಷ:
ಮೂರು ಜನ ಕಾರ್ಮಿಕರು ಸತ್ತರೂ ಈವರೆಗೆ ಜಿಲ್ಲೆಯವರೇ ಆದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗಲಿ, ಸ್ಥಳೀಯ ಶಾಸಕ ತುಕರಾಂ ಆಗಲಿ ಈ ಬಗ್ಗೆ ವಿಚಾರಿಸಿಲ್ಲ, ಕಾರ್ಮಿಕರ ಬಗ್ಗೆ ಮಾತನಾಡದೆ ನಿರ್ಲಕ್ಷ ಧೋರಣೆ ತಾಳಿದ್ದಾರೆಂದು ಆರೋಪಿಸಿದರು