ಸಹಕಾರ ಸಂಘಗಳು ರೈತರ ಜೀವನಾಡಿ: ಕೇಶವ
ಆನೇಕಲ್. ಸೆ.೨೩- ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ಸರ್ಜಾಪುರ ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಕೇಶವರವರು ತಿಳಿಸಿದರು.
ಅವರು ಸೋಂಪುರ ಗೇಟ್ ಬಳಿಯಿರುವ ಬಿಎಂ.ಆರ್. ಕಲ್ಯಾಣ ಮಂಟಪದ ಆವರಣದಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ೪೮ ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನತೆಗೆ ನಮ್ಮ ಸಂಘದಿಂದ ಕಡಿಮೆ ಬಡ್ಡಿದರಲ್ಲಿ ಬೆಳೆಸಾಲ. ಆಭರಣ ಸಾಲ ನೀಡಲಾಗುತ್ತದೆ ಹಾಗೂ ರೈತರ ಮಕ್ಕಳಿಗೆ ಪ್ರತಿಬಾ ಪುರಸ್ಕಾರ ವಿತರಣೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ಆಹಾರ ಪದಾರ್ಥಗಳ ವಿತರಣೆ ಸೇರಿದಂತೆ ಸರ್ಕಾರದಿಂದ ಬರುವಂತಹ ಯೋಜನೆಗಳನ್ನು ಜನರ ಮನೆ ಬಾಗಲಿಗೆ ತಲುಪಿಸುವಂತಹ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದು ರೈತರು ನಮ್ಮ ಸಂಘ ಹಾಗೂ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಕಾಣಿ ಎಂದು ಹೇಳಿದರು.
ಸರ್ಜಾಪುರ ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು ಅಭಿವೃದ್ದಿಯಲ್ಲಿ ರಾಜ್ಯದಲ್ಲಿಯೇ ೨ನೇ ಸಂಘವಾಗಿದ್ದು. ೨೦೨೩-೨೪ನೇ ಸಾಲಿನಲ್ಲೇ ಸುಮಾರು ೩.೨೫ ಕೋಟಿ ರೂಪಾಯಿಯಷ್ಟು ನಿವ್ವಳ ಲಾಬಾಂಶವನ್ನು ನಮ್ಮ ಸಂಘವು ಪಡೆದಿದ್ದು. ಈ ಮೊತ್ತವನ್ನು ಎಲ್ಲಾ ಶೇರುದಾರರಿಗೆ ಶೇ.೧೮ರಷ್ಟು ನಿವ್ವಳ ಲಾಂಭಾಂಶವನ್ನು ಸಮರ್ಪಕವಾಗಿ ನೀಡಲಾಗುತ್ತದೆ ಎಂದರು. ಯಾವುದೇ ಸಂಘವು ಪ್ರಗತಿ ಕಾಣಬೇಕಾದರೆ ಆರ್ಥಿಕತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಆದ್ದರಿಂದ ಸಂಘದಿಂದ ಪಡೆದ ಸಾಲವನ್ನು ರೈತರು ಪ್ರಾಮಾಣಿಕವಾಗಿ ಸಂಘಕ್ಕೆ ಮರುಪಾವತಿ ಮಾಡುವುದರಿಂದ ಸಂಘವು ಇನ್ನಷ್ಟು ಪ್ರಗತಿಯಾಗುತ್ತದೆ ಎಂದು ಹೇಳಿದರು.
೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ೧೦ ಮತ್ತು ೧೨ನೇ ತರಗತಿಯಲ್ಲಿ ಶೇ.೭೫ ರಷ್ಟು ಅಂಕಗಳೊಂದಿಗೆ ತೇರ್ಗಡೆಯಾದ ಸುಮಾರು ೧೧೦ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಾರ್ಷಿಕ ಮಹಾ ಸಭೆಯಲ್ಲಿ ಮುಖಂಡರಾದ ಕೆ.ವಿ.ಶಿವಪ್ಪ. ದೊಮ್ಮಸಂದ್ರ ಜಯಣ್ಣ. ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಕಲಾ. ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಮುತ್ತಾನಲ್ಲೂರು ವಿಶ್ವನಾಥ್ ರೆಡ್ಡಿ. ಎಸ್.ವಿ.ಟಿ ಮಂಜುನಾಥ್. ವಿ.ಮುರಳಿಕೃಷ್ಣ. ಎಸ್.ಆರ್.ಗೋಪಾಲರೆಡ್ಡಿ. ಕೆ.ನಂದಕುಮಾರ್. ವೆಂಕಟರೆಡ್ಡಿ. ರಾಮಸಾಗರ ಮಂಜುನಾಥ್. ಸಂಪಂಗಪ್ಪ. ಅಂಬರೀಶ್. ವೆಂಕಟೇಶ್. ಶ್ರೀಮತಿ ವಿನೋದ. ಸಿ.ಇಒ ನಂಜಪ್ಪ. ಸಂಘದ ಸದಸ್ಯರು. ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.