ಮಾದಿಗ ಸಮುದಾಯದಿಂದ ನಾಳೆ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.23:– ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ನಂಜನಗೂಡು ತಾಲೂಕು ಆದಿ ಜಾಂಬವ ಸಂಘಗಳ ಒಕ್ಕೂಟ ಬಾಬು ಜಗಜೀವರಾಂ ಸೇವಾ ಸಮಿತಿ ಮಾದಿಗ ಹೋರಾಟ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿ ಹಾಗೂ ಮಹಿಳಾ ಸಂಘಗಳ ಒಕ್ಕೂಟದಿಂದ 24ನೇ ತಾರೀಖು ಮಂಗಳವಾರ ಬೃಹತ್ ಪ್ರತಿಭಟನೆ ಮೆರವಣಿಗೆ ಮಾಡಲಾಗುತ್ತದೆ ಎಂದು ರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಂದುವರೆದು ಮಾತನಾಡಿ ಆ ದಿನ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ ಸುಮಾರು ಒಂದು 1500 ಮುಖಂಡರು ಜನಾಂಗದವರು ಸೇರಲಾಗುತ್ತದೆ ಪ್ರಸಿದ್ಧ ಜಾತಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯ ಆರ್ಥಿಕವಾಗಿ ಶೈಕ್ಷಣಿಕವಾಗಿ ಬಾಳ ಹಿಂದುಳಿದಿದ್ದು ನಾವು ನಮ್ಮ ಹಕ್ಕಿಗಾಗಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿ ಫಲವಾಗಿ ಆಗಸ್ಟ್ ಒಂದರಂದು ಸುಪ್ರೀಂ ಕೋರ್ಟ್ ನ ಏಳು ಮಂದಿ ಇರುವ ನ್ಯಾಯ ಪೀಠವು ಸಂವಿಧಾನ ಬದ್ಧವಾಗಿ ಆಯಾ ರಾಜ್ಯದವರು ಒಳ ಮೀಸಲಾತಿ ನೀಡಬೇಕೆಂದು ಆದೇಶವಿದ್ದರೂ ನಮ್ಮ ಗಣ ಸರ್ಕಾರ ಮಾದಿಗ ಸಮುದಾಯ ಬಗ್ಗೆ ತೀರ್ವ ನಿರ್ಲಕ್ಷ್ಯ ವಹಿಸಿ ಮಾದಿಗ ವಿರೋಧಿ ಸರ್ಕಾರವಾಗಿದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಿ ಸಂವಿಧಾನ ಬದ್ಧವಾಗಿ ಆದೇಶ ನೀಡಬೇಕು ನಮ್ಮ ಸಮುದಾಯ ಹಿಂದಿನಿಂದಲೂ ಕಾಂಗ್ರೆಸ್ ಸರ್ಕಾರ ಬೆಂಬಲಿಸಿದ ಬಂದಿದೆ ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಒಳ ಮೀಸಲಾತಿ ಜಾರಿಗೊಳಿಸಿ, ಮಾದಿಗ ಸಮುದಾಯಕ್ಕೆ ನ್ಯಾಯ ಕಲ್ಪಿಸಬೇಕೆಂದು ಒತ್ತಾಯಿಸಲು ನಮ್ಮ ಸಮುದಾಯ ತಾಲೂಕಿನ ಮುಖಂಡರು ಯುವ ಸಂಘದ ಮಿತ್ರರು ಗ್ರಾಮದ ಯಜಮಾನರುಗಳು ಬಹು ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಮಾಡಲಾಗುತ್ತದೆ ಮತ್ತು ಹುಲ್ಲಹಳ್ಳಿ ಸರ್ಕಲ್ ಮಾನವ ಸರಪಳಿ ನಿಲ್ಲಿಸಿ ಒಂದು ಗಂಟೆ ಹೆಚ್ಚು ಕಾಲ ರಸ್ತೆ ತಡೆ ನಡೆಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸುಂದರರಾಜ್ ದೇವರಾಜು ಸ್ವಾಮಿ, ಪುಟ್ಟಸ್ವಾಮಿ ರೇವಣ್ಣ ಕರಿಯಪ್ಪ ಪ್ರಸನ್ನ ಮುರುಗೇಶ್ ರಾಜೇಶ್ ಇತರರಿದ್ದರು.