ಸ್ವರೂಪ ಜಿಲ್ಲೆಗೆ ಪ್ರಥಮ
ಗುಳೇದಗುಡ್ಡ, ಮೇ17: ಸಿಬಿಎಸ್‍ಸಿ 10ನೇ ತರಗತಿಯ ಫಲಿತಾಂಶವನ್ನು ಪ್ರಕಟವಾಗಿದ್ದು, ಸಮೀಪದ ನೀರಲಕೇರಿ ಗ್ರಾಮದ ಎಂ. ಆರ್. ಗಾಣಿಗೇರ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆಗೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ. ಒಟ್ಟು 34 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಸ್ವರೂಪ ಪಾಟೀಲ ಶೇ. 96.6 ಅಂಕಗಳೊಂದಿಗೆ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಪುನೀತ್ ಪತ್ತಾರ ಶೇ. 91.8 ಶಾಲೆಗೆ ದ್ವಿತೀಯ ಸ್ಥಾನ, ಪ್ರಿಯಾಂಕ ದೇವರಮನೆ ಶೇ. 91.2 ಅಂಕಗಳೊಂದಿಗೆ ತೃತೀಯ ಸ್ಥಾನ, ರಾಹುಲ್ ಸಿಂಹಾಸನ ಶೇ. 89.4 ಅಂಕ ಪಡೆದ ನಾಲ್ಕನೇಯ ಹಾಗೂ ಶ್ರಾವಣಿ ಪಾಟೀಲ್ ಶೇ. 88.4 ಅಂಕ ಪಡೆದು ಐದನೇ ಸ್ಥಾನ ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪಿ.ಎಂ ಗಾಣಿಗೇರ, ಕಾರ್ಯದರ್ಶಿ ಸಂತೋಷ ಗಾಣಿಗೇರ ಹಾಗೂ ಪ್ರಾಚಾರ್ಯ ಬಸವರಾಜ ಗೌಡರ ಅಭಿನಂದಿಸಿದ್ದಾರೆ.