ಹನಿಹನಿ ನೀರು ಕೂಡ ಅತ್ಯಮೂಲ್ಯ: ರೇಷ್ಮಾ
ಚನ್ನಪಟ್ಟಣ. ಮೇ. ೧೭- ಪ್ರಸಕ್ತ ದಿನಗಳಲ್ಲಿ ಹನಿಹನಿ ನೀರು ಕೂಡ ಅತ್ಯಮೂಲ್ಯವಾಗಿದ್ದು, ಸಾರ್ವಜನಿಕರುನೀರನ್ನು ಮಿತವ್ಯಯವಾಗಿ ಬಳಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಚನ್ನಪಟ್ಟಣಯೋಜನಾಧಿಕಾರಿ ರೇಷ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೋಡಂಬಳ್ಳಿ ವಲಯದ ನಾಗಪುರ ಕಾರ್ಯಕ್ಷೇತ್ರದ ಹೊಂಗಿರಣ ಜ್ಞಾನ ವಿಕಾಶ ಕೇಂದ್ರದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿಯೋಜನೆ ಯಾಶ್ರಯದ ನೀರಿನ ಬಳಕೆ,ಪ್ಲಾಸ್ಟಿಕ್ ಬಳಕೆ ಹಾಗೂ ಸ್ವಚ್ಛತೆಯ ಬಗ್ಗೆ ಆಯೋಜನೆ ಮಾಡಲಾಗಿದ್ದ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಳೆಯ ಅಭಾವಎದುರಾಗುತ್ತಿರುವ ದಿನದಲ್ಲಿ, ಎಲ್ಲಾಕಡೆ ನೀರಿನಅಭಾವತಲೆದೂರಿದೆ, ಅಲ್ಲದೆಸಾವಿರಾರು ಅಡಿ ಬೋರ್‌ತಗೆದರೂ ನೀರುದೊರೆಯದಸಂದರ್ಭದಲ್ಲಿ ಅನವಶ್ಯಕವಾಗಿ ನೀರನ್ನು ಬಳಕೆ ಮಾಡುವುದನ್ನು ಮೊದಲು ನಿಯಂತ್ರಣ ಮಾಡಬೇಕುಎಂದರು.
ನೀರಿನ ಬಳಕೆಯಂತೆಯೇ ಮನುಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬ:ಳಕೆಯನ್ನು ಪ್ರತಿಯೊಬ್ಬರು ನಿಷೇಧಮಾಡಬೇಕು ಈಗಾಗಲೇ ಸಾಕಷ್ಟು ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯ ಹಾಗೂ ಪ್ರಾಣಿಗಳ ಮೇಲಿನ ಆರೋಗ್ಯಕ್ಕೆ ಹಾನಿಕಾರ ಮಾಡುವುದಲ್ಲದೆ ಭೂಮಿಯಲ್ಲಿನ ಫಲವತ್ತೆಯನ್ನು ನಾಶ ಮಾಡುತ್ತಿವೆಎಂದು ವಿಷಾಧಿಸಿದರು.
ಜ್ಞಾನವಿಕಾಶ ನೀಡುವ ಪ್ರತಿಯೊಂದುಜಾಗೃತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರುಕಾರ್ಯೋನ್ಮುಖರಾಗಬೇಕೆಂದು ತಿಳಿಸಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿಯೋಜನೆಯ ಪ್ರಗತಿಪರ ಕಾರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿಗ್ರಾಮದ ಮುಖಂಡರಾದ ವೆಂಕಟರಾಮು, ಕೃಷ್ಣ, ಕಲಾ ಕಾರ್ಯಕ್ರಮದ ಅಧ್ಯಕ್ಷೆ ಕುಮಾರಿ, ಜ್ಞಾನವಿಕಾಶ ಸಮನ್ವಯಾಧಿಕಾರಿ ಸುಜಾತ, ಸೇವಾ ಪ್ರತಿನಿಧಿಯಾದ ಶ್ವೇತಾ ಹಾಗೂ ಹಲವಾರು ಮುಖಂಡರು ಹಾಜರಿದ್ದರು.