ಇಂದಿನ ಮಕ್ಕಳಿಗೆ ನೈತಿಕ ಮೌಲ್ಯ ಶಿಕ್ಷಣ ಅವಶ್ಯಕ-ಬ್ರಹ್ಮಾಕುಮಾರಿ ಆಶಾ
ಸಂಜೆವಾಣಿ ನ್ಯೂಸ್
ಮೈಸೂರು, ಮೇ.17- ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗುತ್ತಿದೆ. ತಳಪಾಯವಿಲ್ಲದ ಶಿಕ್ಷಣ ಪದ್ದತಿಯಾಗಿದೆ. ನೈತಿಕ ಮೌಲ್ಯ ಶಿಕ್ಷಣ ಪದ್ದತಿಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾಜೀ ಅಭಿಪ್ರಾಯಪಟ್ಟರು.
ಅವರು ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿರುವ ಅಂತರಾಷ್ಟ್ರೀಯ ಅಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 3 ದಿನಗಳ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ಇಂದಿನ ಮಕ್ಕಳಿಗೆ ಗುರುಕುಲ ಶಿಕ್ಷಣ ಪದ್ದತಿಯೂ ಸಹ ಅವಶ್ಯಕ. ಹಿಂದೆ ರಾಮ ಕೃμÁ್ಣದಿಯಾಗಿ ಗುರುಕುಲದಲ್ಲೇ ಅಭ್ಯಾಸ ಮಾಡಿದರು. ಗುರುಗಳ ಸೇವೆ ಮಾಡಿ ನಂತರ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದರು.
ಓಂ ಶಾಂತಿ ನ್ಯೂಸ್ ಸರ್ವಿಸ್ನ ಬಿಕೆ ಆರಾಧ್ಯ ಮಾತನಾಡಿ, ಮಕ್ಕಳ ಮನೋವಿಕಾಸಕ್ಕೆ ಆಧ್ಯಾತ್ಮಿಕ ಜ್ಞಾನ ಧ್ಯಾನ ಕಲೆ ಸಂಸ್ಕøತಿ ಅಜ್ಜಿ ಹೇಳುವ ಕತೆಗಳು ಇವೆಲ್ಲವು ಶಿಬಿರದಲ್ಲಿ ಮಕ್ಕಳಿಗೆ ಪ್ರಭಾವ ಬೀರಿದೆ ಎಂದರು,
ಇದೇ ವೇಳೆ ಮಕ್ಕಳು ತಾವೇ ತಯಾರಿಸಿದ ಕಿರೀಟವನ್ನು ಧರಿಸಿಕೊಂಡು ಸಂಬ್ರಮಿಸಿದರು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಸುಶೀಲ, ನೇತ್ರ, ಸಂಗೀತ, ವೇದ, ಸರಳ, ಅನಿತ, ಲೋಕೇಶ್, ಹರ್ಷ ಹಾಜರಿದ್ದರು.