ಕಡಬೂರು: ಡಾ.ಬಾಬು ಜಗಜೀವನರಾಮ ಜಯಂತಿ ಆಚರಣೆ
ಕಲಬುರಗಿ,ಮೇ.16-ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಡಬೂರು ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 117ನೆ ಜಯಂತೋತ್ಸವ ಡಿ.ಎಂ.ಎಸ್. ಎಸ್. ಸಂಘಟನೆಯ ವತಿಯಿಂದ ವಿಜ್ರಂಬಣೆಯಿಂದ ಆಚರಿಸಲಾಯಿತು.
ಸುಮಿತ್ರಪ್ಪ ಸ್ವಾಮೀಜಿ ಬಾಸುಮಿಯಾ ಗ್ರಾಮ ಪಂಚಾಯತ್ ಅಧ್ಯಕ್ಷರು ಸಿದ್ದಲಿಂಗ ಸಾಹುಕಾರ ಸಿದ್ದರಾಮ ಗೌಡ ರೆಡ್ಡಪ್ಪ ಸಾಹುಕಾರ ಸಿದ್ದು ಗ್ರಾಮ ಪಂಚಾಯತ್ ಸದಸ್ಯರು ಕಡಬೂರು ಪೆÇಲೀಸ್ ಸಿಬ್ಬಂದಿ ವರ್ಗ ಮುಂತಾದರೂ ವೇದಿಕೆ ಮೇಲೆ ಆಸೀನರಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಿ.ಎಂ.ಎಸ್.ಎಸ್. ಸಂಘಟನೆಯ ಸಂಸ್ಥಾಪಕರಾದ ಲಿಂಗರಾಜ್ ತಾರಫೈಲ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಲಬುರ್ಗಿಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ನಾಗರಾe ಗುಂಡಗುರ್ತಿ, ಮಾದಿಗ ಸಮಾಜದ ಯುವ ಮುಖಂಡ ಪ್ರಕಾಶ್ ಮಾಳಗಿ, ಡಿ.ಎಂ.ಎಸ್. ಎಸ್. ಸಂಘಟನೆಯ ಜಿಲ್ಲಾ ಪತ್ರಿಕಾ ಮಾಧ್ಯಮ ಅಧ್ಯಕ್ಷ ರವಿ ಬೆಳಮಗಿ, ಡಿ.ಎಂ. ಎಸ್.ಎಸ್. ಜಿಲ್ಲಾ ನಗರ ಘಟಕ ಉಪಾಧ್ಯಕ್ಷ ಶಿವಕುಮಾರ ಗೋಕುಲ್, ಜಯಂತೋತ್ಸವ ಸಮಿತಿಯ ಅಧ್ಯಕ್ಷ ಸಿದ್ದು ಕಡಬೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗುರುನಾಥ ಮನಗಿರಿ ಕಾರ್ಯಕ್ರಮ ನಿರೂಪಿಸಿದರು. ಸಂಗಮೇಶ ಸ್ವಾಗತಿಸಿದರು. ಸಿದ್ದು ಕಡಬೂರು ವಂದಿಸಿದರು.