ಮಹರ್ಷಿ ಭಗೀರಥರ ಜಯಂತಿ ಆಚರಣೆ
ವಿಜಯಪುರ,ಮೇ.16:ಜಿಲ್ಲಾ ಉಪ್ಪಾರ ಸೇವಾ ಸಂಘದ ವತಿಯಿಂದ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ಮಹರ್ಷಿ ಭಗೀರಥರ ಜಯಂತಿಯನ್ನು ಆಚರಿಸÀಲಾಯಿತು.
ಈ ಸಂದರ್ಭದಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಘದ ಅಧ್ಯಕ್ಷÀ ಜಕ್ಕಪ್ಪ ಯಡವೆ ಮಾತನಾಡಿ, ಉಪ್ಪು ತಿಂದ ಮನೆಗೆ ಎರಡು ಬಗೆಯಬಾರದು ಎಂಬ ನಾಣ್ಣುಡಿಯಂತೆ ಉಪ್ಪಿನ ಮಹತ್ವವನ್ನು ತೋರಿಸಿಕೊಟ್ಟವ ಭಗೀರಥ. ಊಟದಲ್ಲಿ ಉಪ್ಪು ಇಲ್ಲದಿದ್ದರೆ ಅಡುಗೆ ಹೇಗೆ ರುಚಿಸುವುದಿಲ್ಲವೋ ಹಾಗೆಯೇ ಉಪ್ಪಾರ ಸಮಾಜದ ಬಂಧುಗಳಿಲ್ಲದೆ ಸಮಾಜ ಪರಿಪೂರ್ಣವಾಗಲಾರದು ಎಂದರು.
ಅದೇ ರೀತಿ ಭಗೀರಥ ಮಹಾರಾಜರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಅವರ ಆಚಾರ ವಿಚಾರಗಳನ್ನು ಮೈಗೂಢಿಸಿಕೊಂಡು ಸನ್ನಡತೆಯಲ್ಲಿ ನಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ್ಪಾರ ಸೇವಾ ಸಂಘದ ಕಾರ್ಯದರ್ಶಿ ಸಿದ್ದು ಗೇರಡೆ ಮಾತನಾಡಿದರು. ಜೆ.ಎಲ್.ಕಸ್ತೂರಿ, ಭೀಮಣ್ಣ ಉಪ್ಪಾರ, ಯಲ್ಲಪ್ಪ ಬಂಡಿ, ಸುರೇಶ ಶಹಾಪೂರ, ಶ್ರೀನಿವಾಶ ಅಂಬಲಿ, ಸಿದ್ದು ಹೊನಕಟ್ಟಿ, ಸಿದ್ದು ನರಳಿ, ಆಕಾಶ ಉಪ್ಪಾರ, ವಿಠ್ಠಲ ಗಣೂರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.