ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಾಧನೆಯತ್ತ ಗಮನವಿಡಲಿ:ಶರಣು ಸಬರದ
ವಿಜಯಪುರ: ಮೇ.16:ಇಲ್ಲಿನ ಆದರ್ಶ ನಗರ ಶಿವಾಲಯದಲ್ಲಿ ನಾಟ್ಯಕಲಾ ಅಕಾಡೆಮಿ ವತಿಯಿಂದ ‘ಗೆಜ್ಜೆಪೂಜೆ’ ಸಮಾರಂಭ ಜರುಗಿತು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷÀ ಶರಣು ಸಬರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ತಮ್ಮೊಳಗಿರುವ ಪ್ರತಿಭೆಯನ್ನು ಹೊರ ಹಾಕದೆ ತಮ್ಮ ಅಮೂಲ್ಯ ಸಮಯವನ್ನು ಫೇಸ್ಬುಕ್, ವಾಟ್ಸಪ್‍ನಂತಹ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಇಂತಹ ಭರತನಾಟ್ಯ ಕಲೆಗಳಲ್ಲಿ ತೊಡಗಿಸುತ್ತಿರುವುದು ಬಹಳ ಸಂತಸದ ಸಂಗತಿ. ತಂದೆ ತಾಯಿಗಳ ಅಮೂಲ್ಯ ಸಮಯದ ಜೊತೆಗೆ ತಮ್ಮ ಆಸೆ, ಆಕಾಂಕ್ಷೆಗಳನ್ನು ಬತ್ತಿಗೊತ್ತಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಗಲಿರುಳು
ಮಧುಮತಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಂಜುಳಾ ಹಿಪ್ಪರಗಿ, ದತ್ತಾತ್ರೇಯ ಹಿಪ್ಪರಗಿ, ನಾಟ್ಯಕಲಾ ಅಕಾಡೆಮಿ ಅಧ್ಯಕ್ಷೆ ಲಕ್ಷ್ಮಿ ತೇರದಾಳಮಠ, ರಾಹುಲ್ ಕಾಖಂಡಕಿ, ಕರುಣಾ ಬಂಬುರೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳು ಭರತನಾಟ್ಯ ಕಲೆಯನ್ನು ಪ್ರದರ್ಶನ ಮಾಡಿದರು.