ಕನಕ ನವೋದಯ ಕೋಚಿಂಗ್ ಕೇಂದ್ರದಲ್ಲಿ ಬಸವ ಜಯಂತಿ
ವಿಜಯಪುರ,ಮೇ.16:ಅಸಮಾನತೆಯನ್ನು ಹೋಗಲಾಡಿಸಲು ಪಣತೊಟ್ಟು ನಿಂತು ಸಮಾಜದಲ್ಲಿ ಸಮಾನತೆಯನ್ನು ತರಲು ಹೋರಾಡಿದ ಕ್ರಾಂತಿಯ ಪುರುಷ ಬಸವಣ್ಣ. ಜ್ಞಾನದ ನಿಧಿಯಾಗಿ, ಸಮಾಜದ ಧ್ವನಿಯಾಗಿ ವಿಶ್ವದ ತುಂಬಾ ತನ್ನ ಶಕ್ತಿಯನ್ನು ಪಸರಿಸಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಮನುಕುಲಕ್ಕೆ ಬೆಳಕಾದ ಜ್ಞಾನದ ಜ್ಯೋತಿ ಬಸವಣ್ಣ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಪ್ರಭು ಕೊಳಮಲಿ ಹೇಳಿದರು.
ನಗರದ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ನವೋದಯ ಕೋಚಿಂಗ್ ಕೇಂದ್ರದಲ್ಲಿ ಬಸವ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ‘ಬಸವ ಗೋಷ್ಠಿ’ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿದರು.
ಭಾರತ ಯುವ ವೇದಿಕೆ ಅಧ್ಯಕ್ಷ ಯುವ ಮುಖಂಡ ಸುನಿ¯ ಜೈನಾಪುರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಣ್ಣ ಬಸವಣ್ಣನ ವಚನಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದರು.
ಸಂಚಾಲಕ ಕೆ. ರಾಮು, ಶಿಕ್ಷಕಿಯರಾದ ಲಲಿತಾ ರಾಠೋಡ, ಶ್ರೀದೇವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.