ಶ್ರೇಷ್ಠ ದಾರ್ಶನಿಕ ಬಸವಣ್ಣ: ಶಂಭುಲಿಂಗ ದೇಸಾಯಿ
ಜೇವರ್ಗಿ:ಮೇ.16 : ಜಗಜ್ಯೋತಿ ಬಸವಣ್ಣನವರು 12 ನೇ ಶತಮಾನದಲ್ಲಿ ವಚನ ಚಳುವಳಿಯನ್ನು ನಡೆಸಿದವರು. ಸಮಾನತೆಗಾಗಿ ಹೋರಾಡಿದ ಮಾನವತವಾದಿ, ಶ್ರೇಷ್ಠ ದಾರ್ಶನಿಕ ಬಸವಣ್ಣ ನವರು ಎಂದು ಪುರಸಭೆ ಮುಖ್ಯಧೀಕಾರಿ ಶಂಭುಲಿಂಗ ದೇಸಾಯಿ ಅಭಿಮಯಪಟ್ಟರು.
ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ 891 ನೇ ಬಸವ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಭಾವಚಿತ್ರಗಳಿಗೆ ಪುಸ್ಪನಮನ ಸಲ್ಲಿಸಿ ಮಾತನಾಡಿದ ಅವರು.
ಬಸವೇಶ್ವರರವರ ತತ್ವಗಳನ್ನ ನಮ್ಮ ಯುವಜನರು ಅರಿಯಬೇಕು. ಬಸವಣ್ಣನವರು ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು ಎಂಬುವುದು ಮೊದಲು ಯುವ ಶಕ್ತಿ ಅರಿಯಬೇಕು. ನಾವೆಲ್ಲರು ಕೂಡ ನಮ್ಮ ಕಾಯಕವನ್ನು ಸರಿಯಾಗಿ ಮಾಡಿದರೆ ಸಾಕು ನಮ್ಮ ದೇಶ ಅಭೀವೃದ್ದಿಯಾಗುತ್ತದೆ. ಬಸವಣ್ಣನವರ ಕಾಯಕದ ಸಿದ್ದಾಂತ ನಮ್ಮ ಶಕ್ತಿಯಾಗಬೇಕು. ಬಸವಣ್ಣನವರು ಒಬ್ಬ ಶ್ರೇಷ್ಠ ದಾರ್ಶನಿಕ. ಹೆಮರೆಡ್ಡಿ ಮಲ್ಲಮ್ಮ ನವರು ಕೂಡ ಬಸವಣ್ಣನವರಂತೆ ಸಾಮಾಜಿಕ ಸಮಾನತೆ ಬಯಸಿದವರು. ಸಮಾಜದಲ್ಲಿ ಬೇರುರಿದ ಅಂಧ ಶ್ರಧೆಗಳನ್ನ ಹೋಗಲಾಡಿಸಲು ಶ್ರಮಿಸಿದವರು ಎಂದರು.
ಈ ಸಂದರ್ಭದಲ್ಲಿ ಅಧೀಕಾರಿಗಳಾದ ಮಲ್ಲಿಕಾರ್ಜುನ ಹಬ್ಬಳ್ಳಿ, ಶ್ರೀನಿವಾಸ್ ಸೂರ್ಯನ್, ಮಲ್ಲಿಕಾರ್ಜುನ ಕೇಮಶಟ್ಟಿ, ರಾಜಶೇಕರ ಹಿರೇಮಠ, ಸವಿತಾ, ಸುನಂದ, ಲಕ್ಷ್ಮ ದೊಡಮನಿ, ಮನಿಷಾ, ದೇವಿಂದ್ರ, ಧರ್ಮು ಚಿನ್ಹಿ ರಾಠೋಡ, ರಮೇಶ, ರಾಜಶೇಖರ ಪಾಟೀಲ್ ಅವರಾದ ಬಸಲಿಂಗಮ್ಮ, ಶಾಹೀನಾ, ಪೌರಕಾರ್ಮಿಕರಾದ ಮಲ್ಲಿನಾಥ ಹೆಗಡೆ, ಲೇವಿತಾ, ಶಿವಮ್ಮ, ರಾಜು ಪಡದಳ್ಳಿ, ಮನಸುರು, ಪ್ರಭುಲಿಂಗಯ್ಯ, ಶಿವಪ್ಪ, ಮಾನಪ್ಪ ಶಿಲ್ಪಿ, ಅಭಿಶೇಖ, ಧರ್ಮರಾಜ, ಕಲ್ಲಪ್ಪ, ರಾಜು, ಗುರಪ್ಪ, ಷಣ್ಮುಖಪ್ಪ, ಬಸವರಾಜ, ಮರೆಮ್ಮ, ಲಕ್ಷ್ಮೀಬಾಯಿ, ಮಲ್ಲಪ್ಪ ಸೇರಿದಂತೆ ಅನೇಕರಿದ್ದರು.