ಹಸರಗುಂಡಗಿ ಮಾದಿಗರ ಓಣಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಮನವಿ
ಕಲಬುರಗಿ:ಮೇ.16: ಅಫಜಲಪೂರ ತಾಲೂಕಿನ ಹಸರಗುಂಡಗಿ ಗ್ರಾಮದ ಮಾದಿಗರ ಓಣಿಯಲ್ಲಿ ವಿವಿಧ ಮೂಲಭೂತ ಸೌಕರ್ಯ (ಸೌಲಭ್ಯ) ಒದಗಿಸಬೇಕೆಂದು ಹಸರಗುಂಡಗಿ ಗ್ರಾಮದ ಮಾದಿಗ ಸಮಾಜದ ವತಿಯಿಂದ ಹಸರಗುಂಡಗಿ ಗ್ರಾಮ ಪಂಚಾಯತ ಕಾರ್ಯಲಯ ಅಧ್ಯಕ್ಷರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಾದಿಗರ ಓಣಿಯಲ್ಲಿ ಇರುವ ತೆರೆದ ಬಾವಿ ಹೂಳೆತ್ತುವುದು ಹಾಗೂ ಬಾವಿಯ ಸುತ್ತು ಮುತ್ತಲೆಲ್ಲಾ ಸ್ವಚ್ಚಾಗೊಳಿಸುವುದು, ಮಾದಗಿರ ಓಣಿಯಲ್ಲಿ ಕುಡಿಯುವ ನೀರಿನ ಬಹಳ ತೊಂದರೆ ಇದ್ದು ಹೊಸದಾಗಿ ಕೊಳವೆ ಬಾವಿ ಕೊರೆಯಿಸಿ ಮೋಟಾರು ಅಳವಡಿಸಬೇಕು, ಚರಂಡಿ ನೀರು ಅಲ್ಲಲ್ಲಿ ನಿಂತು ಅಲ್ಲಿನ ಜನರಿಗೆ ಮಲೆರಿಯಾ ಟೈಫಡ್ ಹಲವಾರು ರೋಗದಿಂದ ಬಳಲುತ್ತಿದ್ದು, ಚರಂಡಿ ಮತ್ತು ರಸ್ತೆ ದುರಸ್ತಿಗೊಳಿಸಬೇಕು,
ಸುಮಾರು 8 ತಿಂಗಳುಗಳಿಂದ ತಮ್ಮ ಗಮನಕ್ಕೆ ತಂದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ. ಇವು ಬೆಡಿಕೆಗಳು ಇಡೆರಿಸದಿದರೆ ಮುದ್ದಿನ ದಿನಗಳಲ್ಲಿ ಮಾದಿಗ ಸಮಾಜದ ವತಿಯಿಂದ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜು ಎಸ್.ಕಟ್ಟಿಮನಿ, ರಾಜು ಎಂ.ಮದ್ರಬಿ, ಲಕ್ಷ್ಮಣ ಕಟ್ಟಿಮನಿ, ಸಂಗು ಗಣಗಾಪೂರ, ಶಾಮರಾವ ಕಟ್ಟಿಮನಿ, ಯಲ್ಲಪ್ಪ ಕಟ್ಟಿಮನಿ, ಸಿದ್ದಪ್ಪ ಕಟ್ಟಿಮನಿ, ಸೈಬಣ್ಣಾ ಕಟ್ಟಿಮನಿ, ಅರ್ಜುನ ಕಟ್ಟಿಮನಿ ಇದ್ದರು.