ತಾಯಿ ತಂದೆಯರ ಗೌರವಿಸಿದರೆಭಾರತ ಸಂಸ್ಕøತಿಯನ್ನು ಗೌರವಿಸಿದಂತೆ:ಡಾ.ರಾಜಶೇಖರ ಶಿವಾಚಾರ್ಯರು
ಬೀದರ:ಮೇ.16:ಜಗವ ಸೃಷ್ಠಿಸಿದ ದೇವರು ಕಾಣರು. ತಂದೆ ತಾಯಿಯರು. ಕಾಣುವ ದೇವರು ಇವರನ್ನು ಆದರಿಸಿದರೆ ಜಗತ್ತನ್ನೇ ಗೌರವಿಸಿದಂತೆ ಎಂದು ಬೇಮಳಖೇಡ ಹಿರೇಮಠದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಬೀದರ ತಾಲೂಕಿನ ಬುಧೇರಾ ಗ್ರಾಮದ ಶ್ರೀ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆದ ಮಾತೋಶ್ರೀ ಬಸಮ್ಮ ಲಿಂ. ಕಾಶಿನಾಥ ಸಜ್ಜನಶೆಟ್ಟಿ ಅವರ ಷಷ್ಠಬ್ದಿ ಮತ್ತು ನಾಣ್ಯ ತುಲಾ-ಭಾರ ಸಮಾರಂಭದ ಅಭಿನಂದನಾ ನುಡಿಯಲ್ಲಿ ಅಭಿಪ್ರಾಯಪಟ್ಟರು.
ಜಾಗತಿಕ ಪುರಾತನ ಲಿಖಿತ ಅವಶೇಷಗಳಾದ ವೇದವಾಙ್ಮಗಳಲ್ಲಿ ತಾಯಿಯನ್ನು ಮೊದಲು ದೇವರೆಂದು ಹೇಳಲಾಗಿದೆ. ಮಾತೃದೇಮೊಭವ, ಪಿತೃದೇವೋಭವ, ಆಚಾರ್ಯದೇವೋಭವ ಎಂದು ಉಗ್ಗಡಿಸಿದೆ. ತಾಯಿ ತಂದೆಯ ಸೇವೆಯನ್ನು ಮನಸಾರೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದು. ಬೇಡಿದ ಎಲ್ಲವನ್ನೂ ದೊರೆಯುವುದು. ತಾಯಿ-ತಂದೆ, ದೇವರು ಮತ್ತು ಧರ್ಮದ ಋಣವನ್ನು ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ಆದರೆ ಸಾಧ್ಯವಿದ್ದಷ್ಟು ಅವರ ಸೇವೆಯನ್ನು ಸ್ವಲ್ಪವನ್ನಾದರೂ ಮಾಡಿದರೆ ಕಷ್ಟಗಳು ದೂರಾಗಿ ನೆಮ್ಮದಿದೊರೆಯುವುದು. ಭಾರತೀಯ ಸಂಸ್ಕøತಿಗೆ ವಿರುದ್ಧವಾದ ವೃದ್ಧಾಶ್ರಮಗಳು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವುದನ್ನು ಕಡಿವಾಣ ಹಾಕಬೇಕು. ಕಣ್ಮರೆಯಾಗುತ್ತಿರುವ ಅವಿಭಕ್ತ ಕುಟುಂಬ ವ್ಯವಸ್ಥೆಗೆ ಜೀವ ತುಂಬುವುದು ವರ್ತಮಾನದ ತುರ್ತಿನ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ರಾಜಕುಮಾರ ಸಜ್ಜನಶೆಟ್ಟಿ ಸಹೋದರರು ತಾಯಿಯನ್ನು ಗೌರವಿಸುವ ಷಷ್ಠ್ಯಬ್ದಿ ಸಮಾರಂಭವನ್ನು ಆದ್ದೂರಿಯಾಗಿ ನೆರವೇರಿಸಿರುವುದು ಎಲ್ಲರಿಗೂ ಮಾದರಿಯಾದ ಪುಣ್ಯಕಾರ್ಯವೆಂದು ಶ್ರೀಗಳು ಹೇಳಿದರು.
ನೇತೃತ್ವನ್ನು ವಹಿಸಿದ ಬೀದರ ಗುರು ದೇವಾಶ್ರಮದ ಸಿದ್ದೇಶ್ವರಿ ಮಾತಾರವರು ತಾಯಿ ತಂದೆಯರು ನಿತ್ಯ ಕಾಣುವದೇವರಾಗಿದ್ದಾರೆ. ದೇಶ ಸುತ್ತಿ ಸುತ್ತಿ ಪುಣ್ಯಕ್ಷೇತ್ರಗಳ ದರ್ಶನ ಫಲವು ಮನೆಯಲ್ಲಿರುವ ತಾಯಿ ತಂದೆಯರ ಸೇವೆ ಮಾಡಿದರೆ ದೊರೆಯುವುದೆಂದು ಹೇಳಿದರು.
ಸಮ್ಮುಖವಹಿಸಿ ಮಾತನಾಡಿದ ಬೀದರ ಗುರು ದೇವಾಶ್ರಮದ ಶ್ರೀ ಗಣೇಶಾನಂದ ಮಹಾರಾಜರು ದೇವರ ದರ್ಶನ ಪಡೆಯಬೇಕೆಂಬ ಹಂಬಲ ವಿದ್ದರೆ ತಾಯಿ-ತಂದೆಯರ ಮನಮುಟ್ಟಿ ಸೇವೆಯನ್ನು ಮಾಡಿದರೆ ದೇವರು ಖಂಡಿತವಾಗಿ ದರ್ಶನವನ್ನು ನೀಡುವರು. ಇದಕ್ಕೆ ಪತ್ಯಕ್ಷ ಸಾಕ್ಷಿ ಎಂದರೆ ಪಂಡರಪುರಕ್ಕೆ ಪಾಂಡುರಂಗ ವಿಠಲ ಎಂದು ಅವರು ಹೇಳಿದರು. ಶ್ರೀ ಶೈಲದ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿಗಳಾದ ‘ಮಹಾತಪಸ್ವಿ’ ಪೂಜ್ಯಶ್ರೀ ಕರುಣಾದೇವಿ ಮಾತಾರವರು ದಿವ್ಯಸಾನಿದ್ಯವಹಿಸಿ ತಮ್ಮ ಅಮೃತ ಹಸ್ತದಿಂದ ದೀಪವನ್ನು ಬೆಳಗಿಸಿ ಮಾತೋಶ್ರೀ ಬಸಮ್ಮ ತಾಯಿಗೆ ಆರ್ಶಿರ್ವದಿಸಿ ಹರಸಿದರು.
ಬಸವರಾಜ ಶಾಸ್ತ್ರಿ ಉಡುಮನಳ್ಳಿ, ಬಸಯ್ಯ ಸ್ವಾಮಿ ಕಾಡವಾದ, ಪ್ರೋ ಸೋಮೇಶ್ವರ ಬಿರಾದಾರ, ಡಾ|| ಅಜಿತ ಕುಮಾರ ಶಾಸ್ತ್ರಿ, ಅಣ್ಣೆಪ್ಪ ತೇಲಿ ಗಾದಗಿ ಮುಖ್ಯ ಅತಿಥಿಗಳಾಗಿದ್ದರು.