ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಲೀಲಾ’, ‘ರಾಮಲೀಲಾ’
ಬೀದರ್: ಮೇ.16:ಭಾಲ್ಕಿ ತಾಲ್ಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪ್ರದರ್ಶನಗೊಂಡ ‘ಕೃಷ್ಣಲೀಲಾ’ ಹಾಗೂ ‘ರಾಮಲೀಲಾ’ ನಾಟಕಗಳು ಪ್ರೇಕ್ಷಕರ ಮನ ಗೆದ್ದವು.
ಕೃಷ್ಣ ಹಾಗೂ ರಾಮನ ಲೀಲೆಗಳನ್ನು ಅನಾವರಣಗೊಳಿಸಿದ ಪಾತ್ರಧಾರಿಗಳು ಕರತಾಡನಕ್ಕೆ ಪಾತ್ರರಾದರು.
ಕೃಷ್ಣ, ರಾಮ, ಲಕ್ಷ್ಮಣ, ಸೀತೆ, ರಾವಣ, ಭರತ, ನಾರದ ಮೊದಲಾದವರ ಪಾತ್ರಧಾರಿಗಳು ತಮ್ಮ ಮನೋಜ್ಞ ಅಭಿನಯದ ಮೂಲಕ ಭೇಷ್ ಎನಿಸಿಕೊಂಡರು.
ನಿಟ್ಟೂರ(ಬಿ) ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ ಬಿರಾದಾರ ಅವರು ‘ರಾವಣ’, ಸತೀಶ್ ಪೆÇಲೀಸ ಪಾಟೀಲ್ ‘ರಾಮ’, ದತ್ತಾತ್ರಿ ಕರಂಜೆ ‘ಲಕ್ಷ್ಮಣ’, ವಿಶಾಲ್ ಬಿರಾದಾರ ‘ಆಂಜನೇಯ’, ಮೊಗಲಪ್ಪ ಮೇತ್ರೆ ‘ಸೀತೆ’, ಶಿವಾನಂದ ಸ್ವಾಮಿ ‘ನಾರದ’, ರವೀಂದ್ರ ಪೆÇಲೀಸಪಾಟೀಲ ‘ಕೃಷ್ಣ’, ಸಂಗಪ್ಪ ಕರಂಜೆ ‘ಸಕರಮ’, ನಜೀರಮಿಯ ‘ಜನಕರಾಜ’, ದಿಗಂಬರ ಬಂಗಾರ ಕಮಟೆ ‘ಕೈಕೇಯಿ’, ನರೇಶ ಮೇತ್ರೆ ‘ರಾವಣನ ಮಂತ್ರಿ’, ಚಿಂಟು ‘ಜಿಂಕೆ’, ರವೀಂದ್ರ ಕರಂಜೆ, ಕರಣ ಪೆÇಲೀಸ್ ಪಾಟೀಲ, ಅಭಿಷೇಕ, ವಿನಾಯಕ, ಟಿಂಕು ಬಿರಾದಾರ, ವಿನಾಯಕ ಮೇತ್ರೆ, ಸಿದ್ದು ಹೂಗಾರ, ಹರೀಶ್ ಮೇತ್ರೆ, ಗುಂಡು ಕರಂಜೆ ‘ಗೌಳಿಯರು’ ಪಾತ್ರಗಳಿಗೆ
ಜೀವ ತುಂಬಿದರು. ಕಂಟೆಪ್ಪ ಬಿರಾದಾರ ಪಾತ್ರಧಾರಿಗಳಿಗೆ ಬಣ್ಣ ಹಚ್ಚಿದರು.
ಖ್ಯಾತ ಹಾರ್ಮೋನಿಯಂ ಕಲಾವಿದ ಮಲ್ಲಿಕಾರ್ಜುನ ಜೊನ್ನಿಕೇರಿ, ಕಲ್ಲಪ್ಪ ಬಿರಾದಾರ ನಾಗರಾಳ ಹಾಡುಗಳಿಗೆ ತಕ್ಕಂತೆ ಹಾರ್ಮೋನಿಯಂ ನುಡಿಸಿದರು. ಶ್ರೀನಿವಾಸ್ ಮಾಳಗೆ ತಬಲಾ ಸಾಥ್ ನೀಡಿ ನಾಟಕದ ಮೆರುಗು ಹೆಚ್ಚಿಸಿದರು.
ಮಲ್ಲಿಕಾರ್ಜುನ ಬಿರಾದಾರ ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ನೆರೆದವರನ್ನು ರಂಜಿಸಿದರು. ಶಬ್ಬೀರಮಿಯ, ಮುಲ್ತಾನಿ ಬಾಳೂರ ಹಿನ್ನೆಲೆ ಗಾಯನ ಮಾಡಿದರು.
ಜಿಲ್ಲೆಯ ವಿವಿಧೆಡೆಯ ಪ್ರೇಕ್ಷಕರು ರಾತ್ರಿಯಿಡೀ ನಡೆದ ಕೋಲಿನ ನಾಟಕಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.
ಕೃಷ್ಣಲೀಲಾ ಹಾಗೂ ರಾಮಲೀಲಾ ಕೋಲಿನ ನಾಟಕ ಸಮಿತಿಯ ಅಧ್ಯಕ್ಷ ಬಿ.ಎಸ್. ಮಾಲಿಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕರಂಜೆ ಪ್ರಮುಖರಾದ ಸೂರ್ಯಕಾಂತ ಬಿರಾದಾರ, ಧನರಾಜ ಪೂಜಾರಿ, ನಂದಕುಮಾರ ಕರಂಜೆ, ಶಿವಲಿಂಗಪ್ಪ ಕರಂಜೆ, ಓಂಕಾರ ಮಾಲಿಪಾಟೀಲ, ಕಲ್ಲಪ್ಪ ಹೂಗಾರ, ದತ್ತು ಕಾಂಬಳೆ, ರಮೇಶ ಗಂದಗೆ, ಅಶೋಕ ಮಾಲಿಪಾಟೀಲ, ಚಂದ್ರಕಾಂತ ಕರಂಜೆ ಮತ್ತಿತರರು ಪಾಲ್ಗೊಂಡಿದ್ದರು.
ಬಸವ ಜಯಂತಿ ನಿಮಿತ್ತ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.