ಅದ್ಧೂರಿಯಾಗಿ ಜರುಗಿದ ಮೂರ್ತಿ ಪ್ರತಿಸ್ಥಾಪನೆ-ಕಳಸಾರೋಹಣ
ಜೇವರ್ಗಿ :ಮೇ.16: ಪಟ್ಟಣದ ಬುಟ್ನಾಳ ರಸ್ತೆಯ ಡಾ. ನಾರಾಯಣರಾವ ಪಾಗಾ ಹಾಗೂ ಬಾಪುರಾವ ಪಾಗಾ ಅವರ ತೋಟದಲ್ಲಿರುವ ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವ ಜಯಂತಿ ಹಬ್ಬದ ಶುಭ ಮುಹೂರ್ತದಲ್ಲಿ ದಂಡಗುಂಡ ಬಸವೇಶ್ವರರ ನೂತನ ಶಿಲ್ಪ ಮೂರ್ತಿ ಪ್ರತಿಷ್ಠಾಪನೆ ಅದ್ಧೂರಿಯಾಗಿ ಜರುಗಿತು.
ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನ ಸಮಿತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಶುಕ್ರವಾರ ಬೆಳಿಗ್ಗೆ ದಂಡಗುಂಡ ಬಸವಣ್ಣನ ಮೂರ್ತಿಗೆ ರುದ್ರಾಭಿಷೇಕ, ನವಗ್ರಹ ಪೂಜಾ, ಹವನ ಪೂಜಾ, ಶಿವಾಪಾರ್ವತಿ ಕಲ್ಯಾಣೋತ್ಸವ ಹಾಗೂ ಇನ್ನಿತರ ಪೂಜಾ ವಿಧಿ ವಿಧಾನಗಳು ಶಾಸ್ತ್ರಿಗಳ, ಪುರೋಹಿತರ ನೇತೃತ್ವದಲ್ಲಿ ಜರುಗಿತು. ಬೆಳಿಗ್ಗೆ 10 ಗಂಟೆಗೆ ಶಖಾಪೂರದ ಡಾ. ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ದಂಡಗುಂಡ ಬಸವೇಶ್ವರರರ ಪ್ರಾಣ ಪ್ರತಿಷ್ಠಾಪನೆ ಹಾಗೂ ಹೋಮ ಪೂರ್ಣಾಹುತಿ, ಕಳಸಾರೋಹಣ, ಮಹಾಮಂಗಳಾರತಿ ಜರುಗಿತು. ನಂತರ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಸಂಜೆ ವಿವಿಧ ಸಂಗೀತ ಕಲಾವಿದರಿಂದ ಭಜನೆ ನಡೆಯಿತು. ದೇವಸ್ಥಾನಕ್ಕೆ ಪಟ್ಟಣದ ಜನತೆ ಸೇರಿದಂತೆ ಬುಟ್ನಾಳ, ಆಂದೋಲಾ, ಚನ್ನೂರ, ಕೋಳಕೂರ, ರದ್ಧೇವಾಡಗಿ, ಗಂವ್ಹಾರದಿಂದ ಹಲವಾರು ಜನ ಭಕ್ತರು ಆಗಮಿಸಿದ್ದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡರಾದ ರಮೇಶ್ ಬಾಬು ವಕೀಲ, ಬಾಪುರಾವ ಪಾಗಾ, ದೇವಸ್ಥಾನ ಸಮಿತಿ ಅದ್ಯಕ್ಷ ಶಿವಶರಣಪ್ಪಗೌಡ ಮಾಲಿಪಾಟೀಲ, ಸಾಹೇಬಗೌಡ ಕಲ್ಲಾ, ಅನೀಲ ರಾಂಪೂರ, ರಾಜಕುಮಾರ ಕಲ್ಲಾ, ಗುಂಡು ಸಾಹು ಗೋಗಿ, ಗುರುಗೌಡ ಮಾಲಿಪಾಟೀಲ, ಕುಪೇಂದ್ರ ಕಲ್ಲಾ, ವಿಶ್ವನಾಥ ಪಲ್ಲೇದ್, ಸಿದ್ದು ಸಾಹು ಗೋಗಿ, ಆನಂದ ರಾಂಪೂರ, ಕರಣಪ್ಪಗೌಡ ಹಳ್ಳಿ, ಅಖಂಡು ಕಲ್ಲಾ, ಸಂತೋಷಗೌಡ ಮಾಲಿಪಾಟೀಲ, ಶರಣು ಪೂಜಾರಿ, ವಿಶಾಲ ಭಂಕೂರ, ವಿಶ್ವನಾಥ್ ಶಿವಣ್ಣವರ್, ಮಲ್ಲು ಪಲ್ಲೇದ್ , ರಾಜು ಬಳಬಟ್ಟಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.