ಡೈರೆಕ್ಟರ್ ಕ್ಯಾಪ್ ತೊಟ್ಟ ಐಶಾನಿ ಶೆಟ್ಟಿ
ಬೆಂಗಳೂರು,ಮೇ.೧೬-ವಾಸ್ತು ಪ್ರಕಾರ ಸಿನಿಮಾ ನಟಿ ಐಶಾನಿ ಶೆಟ್ಟಿಗೆ ನಿರ್ದೇಶಕಿಯಾಗುವ ಕನಸು ಬಹಳ ದಿನಗಳಿಂದ ಇತ್ತು. ಈಗ ಆ ಕನಸು ನನಸು ಮಾಡುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದಕ್ಕೆ ಅವರು ೨ ವರ್ಷಗಳ ಕಾಲ ಶ್ರಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕಥೆಯ ಮೇಲೆ ಕೆಲಸ ಮಾಡಿದ್ದ ಅವರು ಈಗ ನಟನೆಯ ಜೊತೆಗೆ ನಿರ್ದೇಶನಕ್ಕೂ ಸಿದ್ಧರಾಗಿದ್ದಾರೆ.
ಈ ಹಿಂದೆ ಐಶಾನಿ ಕಾಜಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ .ಇದು ಅನೇಕ ಚಿತ್ಸೋತ್ಸವಗಳಲ್ಲಿ ಆಯ್ಕೆ ಮತ್ತು ಮೆಚ್ಚುಗೆಯನ್ನು ಪಡೆದಿದೆ. ಈಗ ಅವರು ತಮ್ಮ ಮೊದಲ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ. ನನ್ನೂರಿನಲ್ಲಿ ಭಾಗದಲ್ಲಿ ನಡೆಯುವ ಸಂಗತಿಗಳ ಕಥೆ ಇದು.ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ ಇದಾಗಿದೆ. ಇದರಲ್ಲಿ ನಾಯಕ, ನಾಯಕಿ ಇಲ್ಲ. ಮುಖ್ಯ ಪಾತ್ರವೆಂದರೆ ಕಥೆ. ಸದ್ಯಕ್ಕೆ, ಚಿತ್ರದ ಅಂತಿಮ ಕರಡು ಸಿದ್ಧವಾಗಿದೆ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಐಶಾನಿ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
ವಾಸ್ತು ಪ್ರಕಾರ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಐಶಾನಿ, ಪ್ಲಸ್, ರಾಕೆಟ್, ಅಂತರವಿರಲಿ, ನಮ್ ಗಣಿ ಬಿಕಾಂ ಪಾಸ್, ಧರಣಿ ಮಂಡಲ ಮಧ್ಯ ಕರೆ, ಉತ್ಸಿ ಸುಕ್ರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಟಿ ಐಶಾನಿ ಶೆಟ್ಟಿ ಈಗ ನಟನೆಯಿಂದ ನಿರ್ದೇಶನದತ್ತ ಹೊರಳಿದ್ದಾರೆ. ತಾವೇ ಬರೆದ ಕಥೆಯನ್ನು ದೃಶ್ಯರೂಪದಲ್ಲಿ ತೋರಿಸಲು ಸಿದ್ಧರಾಗಿದ್ದಾರೆ. ಇದರೊಂದಿಗೆ ನಟಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.