ಬಸ್ಸು ಹತ್ತಲು ನೂಕು ನುಗ್ಗುಲು, ಮೂರು ತಾಸಿನಲ್ಲಿ ಎಂಟತ್ತು ಮೊಬೈಲ್ ಕಳುವು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.16 :- ಸರ್ಕಾರದ ಗ್ಯಾರಂಟಿ ಯೋಜನೆಯ ಉಪಯೋಗ ಒಂದುಕಡೆ ಒಳ್ಳೆಯದಾದರೆ ಇತ್ತ ಬಸ್ಸು ಹತ್ತಲು ಮುಂದಾದ ನೂಕು ನುಗ್ಗುಲಿನಲ್ಲಿ ಮೊಬೈಲ್ ಕಳುವು ಮಾಡುವ ಕಳ್ಳಕಾಕರ ಸಂಖ್ಯೆ ಜಾಸ್ತಿಯಾಗುತ್ತಿದ್ದೂ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ವಾರದ ಇಂದಷ್ಟೇ ಮೂರೇ ತಾಸಿನಲ್ಲಿ ಎಂಟತ್ತು ಮೊಬೈಲ್ ಕಳುವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಬಸ್ ನಿಲ್ದಾಣ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ  ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳು ಮಹಿಳೆಯರ ಸಂಖ್ಯೆ ಹೆಚ್ಚಾಗಿ ಪ್ರಯಾಣಿಕರ ಜನಜಂಗುಳಿಯಲ್ಲಿ ಕೂಡಿರುತ್ತದೆ ಅಲ್ಲದೆ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಹೊಸಪೇಟೆ, ಚಿತ್ರದುರ್ಗ ಹಾಗೂ ಬಳ್ಳಾರಿ ಕಡೆಗೆ ಹೋಗುವ ಬಸ್ಸುಗಳಿಗೆ ಹತ್ತಲು ಹೆಚ್ಚಿನ ನೂಕು ನುಗ್ಗುಲು ಇರುತಿದ್ದು ಇದನ್ನೇ ಗಮನಿಸುವ ಚಾಣಕ್ಷ ಕಳ್ಳರು ನೂಕು ನುಗ್ಗುಲಿನಲ್ಲಿ ಸೇರಿಕೊಂಡು ಮಹಿಳೆಯರ ಪರ್ಸ್, ಪುರುಷರ ಜೇಬುಗಳಿಗೆ ಕೈ ಹಾಕಿ ಮೊಬೈಲ್ ಕಳುವು ಮಾಡುತ್ತಿರುವ ಘಟನೆ ಜರುಗುತ್ತಿವೆ. ಒಂದು ವಾರದ ಹಿಂದಷ್ಟೇ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಅದು ಬರೀ ಮೂರೇ ತಾಸಿನಲ್ಲಿ ಹತ್ತು ಮೊಬೈಲ್ ಕಳುವಾಗಿರುವ ಬಗ್ಗೆ ಮೊಬೈಲ್ ಕಳಕೊಂಡವರ ದೂರು ಪೊಲೀಸ್ ಠಾಣೆಗೆ ಹೊರಟು ದೂರು ಸಲ್ಲಿಸಲು ಮುಂದಾಗಿ ಮೊಬೈಲ್ ಬೆಲೆಯ ಬಿಲ್ ಹಾಗೂ ಎಲ್ಲಿ ಕಳೆದಿದೆ ಎನ್ನುವ ಬಗ್ಗೆ ಬಾಂಡ್ ಪೇಪರ್ ನಲ್ಲಿ ಆಫೀಡೇವಿಟ್ ಮಾಡಿಸಿಕೊಂಡು ಹೋಗಿ ದೂರು ನೀಡಿದ್ದಾರೆ. ಪೊಲೀಸರು ನಿಲ್ದಾಣದ ಸಿ ಸಿ ಕ್ಯಾಮರಾ ಪತ್ತೆ ಮಾಡಿದರು ಮೊಬೈಲ್ ಕಳುವಿನ ಸುಳಿವು ಸಿಗದೇ ಇದ್ದು ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳು ಯುವಕರನ್ನು ಕರೆದುಕೊಂಡು ವಿಚಾರಣೆ ಮಾಡಿದರು ಮೊಬೈಲ್ ಮಾತ್ರ ಸಿಗಲೇ ಇಲ್ಲಾ ಇದು ಒಂದು ದಿನದ ಮೊಬೈಲ್ ಕಳುವಿನ ದೂರಾಗಿದ್ದು ನೂಕು ನುಗ್ಗುಲು ಸಮಯದಲ್ಲಿ ಮೊಬೈಲ್ ಕಳುವು ಖಂಡಿತವಾಗಿರುತ್ತದೆ.
ಬಸ್  ನಿಲ್ದಾಣಕ್ಕೆ ಸೆಕ್ಯೂರಿಟಿ ಅವಶ್ಯ : ಶಕ್ತಿ  ಯೋಜನೆ ಜಾರಿಯಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದ್ದೂ ನಿಲ್ದಾಣದಲ್ಲಿ ಕಳ್ಳಕಾಕರ ಸಂಖ್ಯೆ ಜಾಸ್ತಿಯಾಗಿದ್ದು ಕಳುವಿನ ಪ್ರಕರಣ ನಿಯಂತ್ರಣಕ್ಕೆ ಸಾರಿಗೆ ಸಂಸ್ಥೆ ಇಲಾಖೆ ನಿಲ್ದಾಣಕ್ಕೆ ಕಂಟ್ರೋಲರ್ ಜೊತೆ ಇನ್ನೊರ್ವ ಕಂಟ್ರೋಲರ್ ಆಗಲಿ ಇಲ್ಲವಾದಲ್ಲಿ ನಿಲ್ದಾಣಕ್ಕೆ ಒಬ್ಬ ಸೆಕ್ಯೂರಿಟಿಯನ್ನು ಕರ್ತವ್ಯಕ್ಕೆ ನೇಮಿಸಿದಲ್ಲಿ ಇಂತಹ ಕಳುವಿನ ಪ್ರಕರಣ ನಿಯಂತ್ರಣವಾಗಬಲ್ಲದು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ ಮತ್ತು ಪೊಲೀಸ್ ಇಲಾಖೆಯ 112 ವಾಹನ ಆಗಾಗ್ಗೆ ನಿಲ್ದಾಣದಲ್ಲಿ ಬಂದು ನಿಂತಲ್ಲಿ ಅಲ್ಲದೆ ಕ್ರೈಮ್ ಪೊಲೀಸರು ಸಿವಿಲ್ ಉಡುಪಿನಲ್ಲಿ ನಿಲ್ದಾಣದಲ್ಲಿನ ಜನರ ಚಲನವಲನ ಗಮನಿಸಿ ಕಳುವಿನ ಪ್ರಕರಣ ನಿಯಂತ್ರಣ ಮಾಡುವಂತೆ ಪ್ರಜ್ಞಾವಂತರು ಸಂಬಂದಿಸಿದ ಇಲಾಖೆಗಳಿಗೆ   ಮನವಿ ಮಾಡುತ್ತಿದ್ದಾರೆ.