ಉತ್ತಮ ಮಳೆ ಕೈಗೆ ಬಂದ ಮಾವು ನೆಲಕ್ಕೆ ಬಿದ್ದು ನಷ್ಟ
ಸಂಜೆವಾಣಿ ವಾರ್ತೆ
ಸಂಡೂರು: ಮೇ: 16: ಕಳೆದ ರಾತ್ರಿ ತಾಲೂಕಿನಾದ್ಯಂತ ಉತ್ತಮ ಮಾಳೆಯಾಗಿದ್ದು ಅಪಾರ ಪ್ರಮಾಣದ ತೋಟದ ಬೆಳೆಗಳು ಹಾಗೂ , ಕೆಲ ಮನೆಗಳು ಬಿದ್ದ ವರದಿಯಾಗಿವೆ.
ತಾಲೂಕಿನ ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 14.8 ಮಿ.ಮೀ., ಚೋರನೂರು ಕೇಂದ್ರದಲ್ಲಿ 25.3 ಮಿ.ಮೀ., ಕುರೇಕುಪ್ಪ ಕೇಂದ್ರದಲ್ಲಿ 11.2 ಮಿ.ಮೀ, ವಿಠಲಾಪುರ ಕೇಂದ್ರದಲ್ಲಿ 16.2 ಮಿ.ಮೀಟರ್ ಮಳೆಯಾಗುವ ಮೂಲಕ ತಾಲೂಕಿನ ದನಕರುಗಳಿಗೆ ಅಲ್ಲ್ಲಿ ನೀರು ಸಿಗುವಂತಾಗಿದೆ, ಈಗಾಗಲೇ ಬರದ ಪರಿಸ್ಥಿತಿ ಉಲ್ಭಣವಾಗಿದ್ದು ನೀರಿನ ಕೊರತೆ ಕಾಡುತ್ತಿತ್ತು ಅದಕ್ಕೆ ಬೋರುಗಳನ್ನು ಹಾಕಿಸುವ ಕಾರ್ಯವನ್ನು ಇಲಾಖೆ ಕೈಗೊಂಡಿದ್ದು ಪರಿಣಾಮ ಮಳೆಯಾದ್ದರಿಂದ ಚೆಕ್ ಡ್ಯಾಂ ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ನಿಲ್ಲುವಂತಾಗಿದೆ, ಅಲ್ಲದೆ ಇಡೀ ವಾತಾವರಣ ತಂಪಾಗಿದ್ದು ರೈತರು ಮುಂದಿನ ಬಿತ್ತನೆಗೆ ಸಿದ್ದತೆ ಪೂರ್ಣಪ್ರಮಾಣದಲ್ಲಿ ತಯಾರಿ ನಡೆಸುತ್ತಿರುವುದು ಕಂಡು ಬಂದಿತು.
ಪ್ರಮುಖವಾಗಿ ತಾಲೂಕಿನ ಯಶವಂತನಗರ ಗ್ರಾಮದ ಮಾವಿನ ತೋಟಗಳಲ್ಲಿ ಅಪಾಋ ಪ್ರಮಾಣ ಕಾಯಿ ಉದುರಿದ್ದು ಬೆಳೆಗಾರರಿಗೆ ಕೈಗೆ ಬಂದ ಬೆಳೆ ನಷ್ಟವಾಗಿದೆ, ದೌಲತ್‍ಪುರ, ಸುಶೀಲಾನಗರ, ಅಂಕಮನಾಳ್, ಯಶವಂತನಗರ, ಭುಜಂಗನಗರಗಳಲ್ಲಿಯ ತೋಟದ ಬೆಳೆಗಳು ನೆಲಕ್ಕೆ ಉರುಳಿದ್ದು ಇದರಿಂದ ಬಾಳೆ ಹಾಕಿದ ರೈತರಿಗೆ ವಿಪರೀತ ನಷ್ಟವಾಗಿದೆ, ಇದಕ್ಕೆ ತಕ್ಷಣ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಹನುಮನಾಯಕ ಅವರು ಭೇಟಿ ನೀಡಿ ಪರಿಶೀಲನೆ ಕಾರ್ಯವನ್ನು ಕೈಗೊಮಡಿದ್ದಾರೆ, ತಾಲೂಕಿನ ಅಂಕಮನಾಳ್ ಗ್ರಾಮದ ರೈತ ಉಜ್ಜಿನಪ್ಪ, ಯರ್ರೆನಳ್ಳಿಯ ಅಬ್ದುಲ್ ಸಾಧಿಕ್, ಒಟ್ಟು 7 ಎಕರೆಯಷ್ಟು ನಷ್ಟವಾಗಿದ್ದು ರೈತರು ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ, ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ಇಲಾಖೆ ಕ್ರಮವಹಿಸುವ ಭರವಸೆಯನ್ನು ನೀಡಿದ್ದಾರೆ.