ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: ಶೆಟ್ಟರ್ ಟೀಕೆ
ಹುಬ್ಬಳ್ಳಿ,ಮೇ.16: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಮಾಜಿ ಸಿ.ಎಂ. ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದಕ್ಕೆಲ್ಲ ಸಿಎಮ್ ಡಿಸಿಎಮ್, ಗೃಹ ಸಚಿವರೇ ಜವಾಬ್ದಾರಿ ಎಂದರು.
ನಗರದಲ್ಲಿ ಅಂಜಲಿ ಹತ್ಯೆ ಮಾಡಿರುವವರಿಗೆ ಶಿಕ್ಷೆಯಾಗಬೇಕು ಎಂದವರು ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಪೆÇಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಪೆÇಲೀಸ ವ್ಯವಸ್ಥೆಯಲ್ಲಿ ಲೋಪದೋಷ ಇದೆ. ಹೀಗೆ ಮುಂದುವರಿದರೆ ಇನ್ನೂ ದೊಡ್ಡ ಪ್ರಮಾಣದ ಕಾನೂನು ಸುವ್ಯವಸ್ಥೆ ಹಾಳಾಗಬಹುದು. ಕಠಿಣ ಕ್ರಮದ ಭರವಸೆ ಲೋಪದೋಷ ಆಗಿದೆ. ಎಲ್ಲೋ ಒಂದು ಕಡೆ ಅಧಿಕಾರಿಗಳ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಇಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಜಾಸ್ತಿ ಇದೆ. ಇದು ಸರಕಾರದ ಪತನಕ್ಕೂ ಕಾರಣವಾಗಬಹುದು. ಬಿಜೆಪಿಗೆ ಆಪರೇಶನ್ ಕಮಲ ಮಾಡೋ ಅವಶ್ಯಕತೆ ಇಲ್ಲ ಎಂದು ಅವರು ನುಡಿದರು.
ಮೈತ್ರಿಗೂ ಪ್ರಜ್ವಲ್ ರೇವಣ್ಣನಿಗೂ ಸಂಬಂಧವಿಲ್ಲ ಎಂದ ಅವರು, ಬೆಳಗಾವಿಯಲ್ಲಿ ತಾವು ಗೆಲ್ಲುವುದಾಗಿ ಹೇಳಿದರು.