ಮೀನು ಹಿಡಿಯುವ ಗಾಳದ ಮುಳ್ಳು ಸಿಲುಕಿದ್ದ ನಾಗರಹಾವು ಸಂರಕ್ಷಣೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮೇ 16; ಮೀನು ಹಿಡಿಯುವ ಗಾಳದ ಮುಳ್ಳು ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದ ಬೃಹದಾಕಾರದ ನಾಗರಹಾವೊಂದನ್ನು ಶಿವಮೊಗ್ಗದ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸಂರಕ್ಷಿಸಿದ ಘಟನೆ ನ್ಯಾಮತಿ ತಾಲೂಕಿನ ಕಡದಕಟ್ಟೆ ಗ್ರಾಮದಲ್ಲಿ ನಡೆದಿದೆ.ರಸ್ತೆಯೊಂದರ ಮೇಲೆ ಗಾಳದ ಮುಳ್ಳು ಎಸೆಯಲಾಗಿತ್ತು. ಅದು ಹಾವಿನ ಕತ್ತಿನ ಭಾಗ ಹಾಗೂ ಬಾಲದ ಬಳಿ ಸಿಲುಕಿತ್ತು. ಗ್ರಾಮಸ್ಥರ ಮಾಹಿತಿ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಅವರು, ಸುರಕ್ಷಿತವಾಗಿ ಹಾವಿನಲ್ಲಿ ಸಿಲುಕಿದ್ದ ಗಾಳದ ಮುಳ್ಳು ತೆಗೆದು ಹಾವನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.