ಹಿರಿಯೂರಿನಲ್ಲಿ ತಿಂಡಿ ಮೇಳ : ರುಚಿ ಸವಿದ ಪ್ರೇಕ್ಷಕರು

ಸಂಜೆವಾಣಿ ವಾರ್ತೆ
ಹಿರಿಯೂರು : ಮೇ 16- ಹಿರಿಯೂರಿನ ವಾಸವಿ ಮಹಲ್ ನಲ್ಲಿ ವಾಸವಿ ಜಯಂತಿಯ ಅಂಗವಾಗಿ ವಾಸವಿ ದೀಕ್ಷಾ ಸಮಿತಿ ವತಿಯಿಂದ ತಿಂಡಿ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಸುಮಾರು 10 ತಂಡದವರು ಭಾಗವಹಿಸಿ ನಾಲಿಗೆಗೆ ರುಚಿ ಕೊಡುವಂತಹ ವಿವಿಧ ತಿಂಡಿ ತಿನಿಸುಗಳನ್ನು ಮತ್ತು ಪಾನೀಯಗಳನ್ನು ಸ್ಥಳದಲ್ಲೇ ತಯಾರಿಸಿ ಬಂದಿದ್ದ ವೀಕ್ಷಕರಿಗೆ ನೀಡಿದರು.  ಮಂಗಳವಾರ ಹಿರಿಯೂರಿನಲ್ಲಿ ಅಂಗಡಿ ಮಳಿಗೆಗಳು ರಜ ಇದ್ದ ಪ್ರಯುಕ್ತ ವಾಸವಿ ಮಹಲ್ ತುಂಬಾ ಕುಟುಂಬ ಸಮೇತರಾಗಿ ಬಂದಿದ್ದ ಜನ ತುಂಬಿಕೊಂಡಿದ್ದು ತಮಗೆ ಇಷ್ಟವಾದ ತಿಂಡಿ ತಿನಿಸುಗಳನ್ನು  ನಿಗದಿತ ದರಕ್ಕೆ ಪಡೆದು ಬಗೆ ಬಗೆಯ ತಿಂಡಿ ಮೇಳದ ರುಚಿಯನ್ನು ಸವಿದರು.