ಕನ್ನಡ ವಿವಿಯಲ್ಲಿ ಬಸವ ಜಯಂತಿ : ಉಪನ್ಯಾಸ ಮತ್ತು ವಚನ ಗಾಯನ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ 13; ಪರ್ಯಾಯ ಸಂಸ್ಕೃತಿಯನ್ನು ಹುಟ್ಟು ಹಾಕುವ ಮೂಲಕ ಬಸವಣ್ಣನವರು ಸಮಾಜದಲ್ಲಿದ್ದ ಅಸಮಾನತೆಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮರೇಶ ನುಗಡೋಣಿ ಅವರು ಅಭಿಪ್ರಾಯ ಪಟ್ಟರು.
ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗ ಭುವನ ವಿಜಯದಲ್ಲಿ ಬಸವ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಉಪನ್ಯಾಸ ಮತ್ತು ವಚನ ಗಾಯನ ಕಾರ್ಯಕ್ರಮದಲ್ಲಿ ಬಸವಣ್ಣ  ಪರ್ಯಾಯ ಸಂಸ್ಕೃತಿ ಜನಕ ಕುರಿತು ಉಪನ್ಯಾಸ ನೀಡುತ್ತಿದ್ದರು. ವರ್ಣಭೇದ, ವರ್ಗಭೇದ ಜಾತಿ, ವೃತ್ತಿ, ಲಿಂಗ, ಆಹಾರ, ವಾಸದ ಸ್ಥಳಗಳಲ್ಲಿ ಇಂತಹ ಅನೇಕ ಭೇದಗಳು ಅಸಮಾನತೆಗಳು ತುಂಬಿ ತುಳುಕುತ್ತಿದ್ದವು. ಜೊತೆಗೆ ಹಲವು ನಿಷೇಧಗಳೂ ನಡುವೆ ಬಸವಣ್ಣನವರು ಇವ ನಮ್ಮವ ಇವ ನಮ್ಮವ ಎಂದು ಅಣ್ಣ, ಅಕ್ಕ, ಅಯ್ಯ ಎಂದು ಕರೆಯುವ ಸಂಸ್ಕೃತಿಯ ಮೂಲಕ ಕೆಳವರ್ಗಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಧರ್ಮದ ನಿರಾಕರಣೆ, ಪ್ರಭುತ್ವದ ನಿರಾಕರಣೆ ಅಗ್ರಹಾರ, ಮಠ-ಮಾನ್ಯ, ದೇವಾಲಯಗಳ ನಿರಾಕರಣೆಯ ಚಳುವಳಿ ಕೆಳವರ್ಗಗಳಿಂದ ಆರಂಭವಾಯಿತು. ಕೆಳವರ್ಗಗಳು ಬೇಡುವ ಜಾಗದಲ್ಲಿ ಕೆಳವರ್ಗಗಳೇ ದಾಸೋಹ ನೀಡುವ ಸಂಸ್ಕೃತಿಯನ್ನು ಹುಟ್ಟುಹಾಕಿ ದುಡಿದರೆ ಮಾತ್ರ ಲಿಂಗಕ್ಕೆ ಅರ್ಪಿಸಬೇಕೆಂದು ಕಾಯಕತತ್ವದ ಪಾವಿತ್ರ್ಯವನ್ನು ತಂದ ಬಸವಣ್ಣನವರು ಸಂಪತ್ತಿನ ಸಮಾನತೆ ತಂದರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿ ಡಾ.ವಿಜಯ ಪೂಣಚ್ಚ ತಂಬಂಡ ಬಸವಣ್ಣ ಸಾಂಸ್ಕೃತಿಕ ನಾಯಕ ವಿಶ್ವಗುರು ಎಂದು ಘೋಷಿಸಿರುವುದು ಕನ್ನಡಕ್ಕೆ ಕೊಟ್ಟ ಅತಿದೊಡ್ಡ ಗೌರವ ಎಂದು ಕರ್ನಾಟಕ ಸರ್ಕಾರಕ್ಕೆ  ರಾಷ್ಟ್ರ, ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ಕೊಡುಗೆ ಬಗ್ಗೆ ಚರ್ಚೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸ್ವಾಗತಿಸಿ, ಪ್ರಾಸ್ತಾವಿಕ ನುಡಿದ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಅವರ ಕಾರ್ಯಕ್ರಮದ ರೂಪುರೇಷೆ ತಿಳಿಸಿ, ಶಾಸ್ತ್ರೀಯ, ಜಾನಪದ, ಅಲೆಮಾರಿ, ಫ್ಯೂಷನ್ ಮಾದರಿಯಲ್ಲಿ ವಿದ್ಯಾರ್ಥಿಗಳು ಹಾಡಲಿದ್ದಾರೆ. ಎಲ್ಲರೂ ಪ್ರೋತ್ಸಾಹಿಸಿ ಎಂದರು.
One attachment • Scanned by Gmail