ಮದನ್ ಪಟೇಲ್ ಗೆ ಸನ್ಮಾನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.16: ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಭಾರತೀಯ ಚಲನಚಿತ್ರೋದ್ಯಮದಲ್ಲಿ ನಿರ್ದೇಶಕ ನಟ ಮತ್ತು ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು ಕೆಲವು ಚಿತ್ರಗಳಲ್ಲಿ ಬರಹಗಾರರಾಗಿಯು ಇನ್ನೂ ನಿರಂತರವಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಕೆಲಸವನ್ನು ಕೇಂದ್ರೀಕರಿಸುತ್ತಾ ಇದ್ದಂತ ಒಳ್ಳೆಯ ಉತ್ತಮ ನಿರ್ದೇಶಕ ನಟ ಮತ್ತು ನಿರ್ಮಾಪಕರಾದಂತ  ಮದನ್ ಪಟೇಲ್ ಇವರು  ಬಳ್ಳಾರಿ ನಗರಕ್ಕೆ ಆಗಮಿಸಿದಾಗ ಇವರಿಗೆ ರಾಯಲ್ ಫ್ರೂಟ್ ಹೋಟೆಲ್ ನಲ್ಲಿ  ಹೃದಯಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ  ಲಕ್ಷ್ಮೀನರಸಿಂಹಯ್ಯ ರಾಜ್ಯ ಛಲವಾದಿ ಮುಖಂಡರು ಬೆಂಗಳೂರು
ಶ್ರೀಮತಿ ಜ್ಯೋತಿ ಕಾಂಗ್ರೆಸ್ ಪಕ್ಷದ ರಾಜ್ಯ  ಕಾರ್ಯದರ್ಶಿ ಬಳ್ಳಾರಿ ಶಂಕರ್ ನಂದಿಹಾಳ್  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ
ಎಂಎಂ ಓಬಳೇಶ್ ನಿರ್ದೇಶಕರು ಚಲನಚಿತ್ರ ಬಳ್ಳಾರಿ
ಶೇಖರಪ್ಪ ಭೀಮರಾವ್ ಐಎಎಸ್ ಐಪಿಎಸ್ ಎಸ್ ಕೆ ಎಸ್ ತರಬೇತಿ ಕೇಂದ್ರ ಬಳ್ಳಾರಿ ಅನಂತ ರಾಜ್ ಎಂಎಂ ವಿಜಯ ಚಕ್ರವರ್ತಿ ಬಳ್ಳಾರಿ ಲೋಕೇಶ್ ಕ್ಯಾಮೆರಾ ಮ್ಯಾನ್,  ತಿಮ್ಮಪ್ಪ ನಾಗೇಶ್ ಹುಚ್ಚಂಗಿ ಡಿ ಓ ಪಿ ಬೆಂಗಳೂರು ಮಲ್ಲಿಕಾರ್ಜುನ ಬಿ ಗೋನಾಳ್ ಹಾಗೂ ಇನ್ನಿತರರು ಭಾಗವಹಿಸಿದ್ದರು