ಯುವಜನತೆಯ ಭವಿಷ್ಯ ರೂಪಿಸುವಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಸೇವೆ ಶ್ಲಾಘನೀಯ
(ಸಂಜೆವಾಣಿ ವಾರ್ತೆ )
ಬಳ್ಳಾರಿ, ಮೇ. 16: ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ನ  ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ನಿರುದ್ಯೊಗಿ ಯುವಜನತೆಗೆ ಉದ್ಯೋಗ ನೀಡುವಲ್ಲಿ  ಜವಾಬ್ದಾರಿಯುತವಾಗಿ ಸೇವೆ ಮಾಡುತ್ತಿದೆಂದು ಶ್ರೀ ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಧಾಕೃಷ್ಣ  ಶ್ಲಾಘಿಸಿದ್ದಾರೆ.
ಅವರು ನಿನ್ನೆ  ಸಂಸ್ಥೆಯ ಸಭಾಂಗಣಲ್ಲಿ ನಡೆದ ಬ ಸ್ಕಿಲ್ ಡೆವಲಪ್‍ಮೆಂಟ್ಸೆಂಸೆಂ ನ ಟರ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಿ  ಮಾತನಾಡಿದರು
ಪ್ರಸ್ತುತ ಪ್ರತಿಯೊಬ್ಬರೂ ಇಂಗ್ಲೀಷ್ ಮತ್ತು ಸಂವಹನ ಶೈಲಿಕಯನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಸಮೂಹ ಶಿಕ್ಷಣ ಸಂಸ್ಥೆಯಿಂದ ಉಚಿತವಾಗಿ ಸ್ಪೋಕನ್ ಇಂಗ್ಲೀಷ್ ತರಬೇತಿಗೆ ಅಗತ್ಯ ಸಹಕಾರ ನೀಡುವೆ. ನೀವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ಸ್ಪರ್ಧಾತ್ಮಕವಾದ ಪಠ್ಯದ ಮೂಲಕ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಿ ಪ್ರತಿಯೊಬ್ಬರಲ್ಲೂ ಕಲಿಕೆಯ ಮೌಲ್ಯಮಾಪನ ಮಾಡಿ, ಕೌಶಲ್ಯವಂತರನ್ನಾಗಿ ರೂಪಿಸಲಾಗುತ್ತದೆ ಎಂದರು.
 ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಮಾತನಾಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಸಂಸ್ಥೆಯು ಈ  ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಪ್ರಾರಂಭಿಸಿ ಕರ್ನಾಟಕದಲ್ಲಿಯೇ ವಿಶಿಷ್ಟವಾಗಿ – ವಿಶೇಷವಾಗಿ ಮತ್ತು ವಿಭಿನ್ನವಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಈ ಸಂಸ್ಥೆಯ  ಅಭಿವೃದ್ಧಿಗೆ ವೀರಶೈವ ವಿದ್ಯಾವರ್ಧಕ ಸಂಘವು ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.
 ಸಂಸ್ಥೆಯ ಹಿರಿಯ ಉಪಾಧ್ಯಕ್ ಯಶವಂತರಾಜ್ ನಾಗಿರೆಡ್ಡ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿ, ಎಸ್‍ಡಿಸಿಯ ಗುಣಮಟ್ಟದ ಬೋಧನೆ – ಕೌಶಲ್ಯ ಮತ್ತು ಕಲಿಸುವ ವಿವಿಧ ಕೋರ್ಸ್‍ಗಳ ಕುರಿತು ವಿವರಣೆ ನೀಡಿ, ನಮ್ಮ ಸಂಸ್ಥೆಯ ಎಸ್‍ಡಿಸಿಯು ಅನೇಕ ನಿರುದ್ಯೋಗಿಗಳಿಗೆ ಹೊಸ ಬದುಕನ್ನು ರೂಪಿಸುವಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ. ನಮ್ಮ ಸಂಸ್ಥೆಯ ರೈತಣ್ಣನ ಊಟ, ರೈತಣ್ಣನ ಕ್ಲಿನಿಕ್, ರೈತಣ್ಣನ ಹಾಸಿಗೆ ಯೋಜನೆಗಳು ಸಾಕಷ್ಟು ಜನಪ್ರಿಯಗೊಂಡಿವೆಂದರು.
 ಸಂಸ್ಥೆಯ ಗೌರವ ಅಧ್ಯಕ್ಷ ಸಿ. ಶ್ರೀನಿವಾಸರಾವ ಜಂಟಿ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನಗೌಡ
ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ  ಶಶಿಕಾಂತ ವೀರಾಪುರ ಮತ್ತು ಮೆರ್ಸಿ ಮೊನಿಶಾ, ಅವರು, ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನಲ್ಲಿ ಕೇವಲ ಕೌಶಲ್ಯವನ್ನು ಬೋಧಿಸುವುದಿಲ್ಲ. ಯಶಸ್ವಿ ಬದುಕಿಗೆ ಅಗತ್ಯವಿರುವ ಶಿಸ್ತು, ಸಂಯಮ, ತಾಳ್ಮೆ, ಅಪ್ಲಿಕೇಷನ್ ಆಫ್ ಮೈಂಡ್ ಸೇರಿ ವಿವಿಧ ವಿಷಯಗಳನ್ನು ಕಲಿಸುತ್ತದೆ. ಈ ಕೇಂದ್ರವು ನಿಜಕ್ಕೂ ಉತ್ತಮವಾದ ಸಂಸ್ಥೆ ಎಂದರು.
 ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಸ್ವಾಗತಿಸಿದರು.  ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ವಂದನಾರ್ಪಣೆ ಸಲ್ಲಿಸಿದರು.
ಸಂಸ್ಥೆಯ ಪದಾಧಿಕಾರಿಗಳು, ವಿಶೇಷ ಆಹ್ವಾನಿತರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.