ಮೇ19 ಕ್ಕೆ ಅಂತರ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧೬ : ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಮೇ.೧೯ ರ ಭಾನುವಾರದಂದು ನಗರದ ಗುರುಭವನದಲ್ಲಿ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ತಿಳಿಸಿದರು.ಈ ಪಂದ್ಯಾವಳಿಯಲ್ಲಿ 08,10 ,12,14,16,19, ವರ್ಷದ ಒಳಗಿನ ಮಕ್ಕಳಿಗೆ 80ಕ್ಕೂ ಹೆಚ್ಚು ವಿಶೇಷ ಬಹುಮಾನ ನೀಡಲಾಗುತ್ತದೆ ಹಾಗೂ ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಎಲ್ಲಾ ಸ್ಪರ್ಧಾಳುಗಳು ಭಾಗವಹಿಸಬಹುದು 200ಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸುವ ನಿರೀಕ್ಷೆ ಇದ್ದು ಈ ಪಂದ್ಯಾವಳಿಗೆ ಹೆಸರನ್ನು ನೋಂದಾಯಿಸಲು ಕೊನೆಯ ದಿನ ಮೇ 18 ಸಂಜೆ 6:00 ಆಗಿರುತ್ತದೆ ಹೆಚ್ಚಿನ ವಿವರಗಳಿಗೆ ಈ ಕೆಳಗಿನ ನಂಬರ್ಗೆ ( ಯುವರಾಜ್ 9945613469 ಮಂಜುಳಾ 7259310197) ಸಂಪರ್ಕಿಸಲು ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ತಿಳಿಸಿದ್ದಾರೆ.