ದೇಶದ ಅಭಿವೃದ್ದಿಗೆ ಸಹಕಾರ ಸಂಘಗಳ ಪಾತ್ರ ಹೆಚ್ಚು: ಎನ್.ಶಂಕರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.23-ದೇಶದ ಅಭಿವೃದ್ದಿಗೆ ಸಹಕಾರ ಸಂಘಗಳ ಪಾತ್ರವು ಹೆಚ್ಚು. ಬ್ಯಾಂಕ್‍ಗಳ ಮಾದರಿಯಲ್ಲಿ ಸಾರ್ವಜನಿಕರಿಗೆ ಸಹಕಾರಿಗಳು ಸೇವೆ ನೀಡುತ್ತಾ ಬಂದಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್ ತಿಳಿಸಿದರು.
ನಗರದ ರಥದಬೀದಿಯ ಚೌಡೇಶ್ವರಿ ಕಾಂಪ್ಲೆಕ್ಸ್‍ನಲ್ಲಿಇರುವ ಮಚೆರ್ಂಟ್ಸ್ ಸೌಹಾರ್ದ ಕ್ರೆಡಿಟ್‍ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ 9ನೇ ವಾರ್ಷಿಕೋತ್ಸವ ಮತ್ತು ಸರ್ವ ಸದಸ್ಯರ ಸಭೆ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಿಗಳಿಗೆ ಸಾಲದ ಸೌಲಭ್ಯವನ್ನು ಶೀಘ್ರವಾಗಿ ನೀಡುತ್ತಿರುವ ಸಂಸ್ಥೆಗಳು ಎಂದರೆ ಅದು ಸಹಕಾರಿ ಸಂಘಗಳು, ಸಹಕಾರಿ ಸಂಘಗಳಿಂದ ಹಲವಾರು ಕುಟುಂಬಗಳು ಅಭಿವೃದ್ದಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಚೆರ್ಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಅಧ್ಯಕ್ಷ ಬಿ.ಮಹೇಶ್‍ಕುಮಾರ್ ಮಾತನಾಡಿ, ನಮ್ಮ ಸಹಕಾರಿಗೆ 9 ವರ್ಷತುಂಬಿದೆ. ಮಾಜಿ ಸಚಿವ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರು ಉದ್ಘಾಟಿಸಿದ ಸಹಕಾರಿಯಾಗಿದೆ. ಈ ಸಹಕಾರಿಯನ್ನು ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ತೆರೆಯುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ. ಪ್ರತಿಯೊಬ್ಬ ಸದಸ್ಯರು ಸಹಕರಿಸಬೇಕು ಎಂದರು.
ಸಹಕಾರಿಯಲ್ಲಿ ಸಾಲ ಪಡೆದವರು ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸಿದರೆ ಹೆಚ್ಚಿನಜನರಿಗೆ ಸಾಲವನ್ನು ನೀಡಲು ಸಾಧ್ಯವಾಗುತ್ತದೆ. ಸದಸ್ಯರು ಹಾಗೂ ನಿರ್ದೆಶಕರು ಜನರಿಗೆ ಸಹಕಾರಿಗಳಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಹೆಚ್ಚಿನ μÉೀರ್‍ಗಳನ್ನು ತರುವಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಿ.ಎಂ.ವೆಂಕಟೇಶ್, ಅಬ್ರಾರ್‍ಸುಲ್ತಾನ್, ಎಸ್,ವಿ.ರಘು, ವಿಜಯಕುಲಾಲ್, ಸಿ.ಎಂ ಮಲ್ಲಿಕಾರ್ಜುನಸ್ವಾಮಿ, ಪದ್ಮಶ್ರೀ ಬ್ರಹ್ಮೇಶ್‍ಕುಮಾರ್, ಸಿ.ರಂಗರಾಜು, ಶ್ರೀನಾಥ್ ಹಾಜರಿದ್ದರು.