ಹುಲಿದಾಳಿಗೆ ಎತ್ತು ಸಾವು
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:, ಸೆ.23- ನೀರು ಕುಡಿಯಲು ಕರೆದುಕೊಂಡು ಹೋಗುತ್ತಿದ್ದ ಎತ್ತಿನ ಮೇಲೆ ಹುಲಿ ದಾಳಿ ನಡೆಸಿಕೊಂಡು ಹಾಕಿರುವ ಘಟನೆ ಜರುಗಿದೆ.
ಪಿರಿಯಾಪಟ್ಟಣ ತಾಲೂಕಿನ ಹುಣಸೆಕುಪ್ಪೆ ಗ್ರಾಮದ ಬಳಿಯ ಹಲಸೂರು ಸರ್ವೆ ನಂಬರ್ 6 ರಲ್ಲಿ ಎತ್ತುಗಳನ್ನು ಅಣ್ಣೇಗೌಡರ ಮಗ ಮಂಜು ಎಂಬುವರು ನೀರು ಕುಡಿಸಲು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹುಲಿಯೆಂದು ದಾಳಿ ನಡೆಸಿದ್ದು ಏತ್ತು ಸ್ಥಳದಲ್ಲೇ ಕೊಂದು ಹಾಕಿದೆ. ಕೆಲ ದಿನಗಳ ಹಿಂದೆ ಎಷ್ಟೇ ಜೋಳದ ಹೊಲ ಒಂದರಲ್ಲಿ ಹಂದಿಯನ್ನು ಬೇಟೆಯಾಡಿದ ಹುಲಿ ಮತ್ತೆ ಇದೆ ಗ್ರಾಮದ ಪಕ್ಕದಲ್ಲಿ ಹಸುವಿನ ಮೇಲೆ ದಾಳಿ ನಡೆಸಿದೆ.
ಅರಣ್ಯ ಅಧಿಕಾರಿ ಭೇಟಿ ಘಟನೆಯ ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಪಾರ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹುಲಿಯನ್ನು ಕೊಂದು ಹಾಕಲು ಅನುಮತಿ ನೀಡುವಂತೆ ಆಗ್ರಹಿಸಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಆರ್‍ಎಫ್‍ಒ ಪಾರ್ವತಿ ದಾಳಿ ನಡೆಸಿರುವುದು ಹುಲಿಯೊ ಅಥವಾ ಚಿರತೆಯು ಎಂಬುದು ಪರಿಶೀಲಿನಿಂದ ತಿಳಿಯಬೇಕಿದ್ದು ಮರಣೋತ್ತರ ಪರೀಕ್ಷೆ ನಡೆಸಿದ ನಂತರವಷ್ಟೇ ಇದು ಖಚಿತಗೊಳ್ಳಲಿದೆ ಸದ್ಯಕ್ಕೆ ಕ್ಯಾಮೆರಾ ಟ್ರಾಫಿಂಗ್ ಮಾಡಲಾಗುವುದು. ಗ್ರಾಮಸ್ಥರು ತಾಳ್ಮೆಯಿಂದ ಸಹಕಾರ ನೀಡಬೇಕು ತಾಳ್ಮೆಯಿಂದ ಸಹಕಾರ ನೀಡಬೇಕು. ವನ್ಯಜೀವಿಗಳ ಮೇಲೆ ಯಾವುದೇ ದಾಳಿ ನಡೆಸಬಾರದು ಎಂದು ಗ್ರಾಮಸ್ಥರನ್ನು ಸಮಾಧಾನಪಡಿಸಿರು.
ಐಟಿಸಿ ಅವರಿಗೆ ತರಾಟೆ
ಐಟಿಸಿಗೆ ಸೇರಿದ ಈ ಜಮೀನಿನಲ್ಲಿ ಸೂಕ್ತ ರೀತಿಯಲ್ಲಿ ಕಳೆ ನಿರ್ವಹಣೆ ಮಾಡದೆ ಕಾಡಿನ ರೀತಿಯಲ್ಲಿ ಬೆಳೆದುಕೊಂಡಿದ್ದು ವನ್ಯಜೀವಿಗಳು ಆಗಮಿಸಲು ಇದು ಕಾರಣವಾಗಿದೆ ಆದ್ದರಿಂದ ಶೀಘ್ರದಲ್ಲೇ ಜಮೀನನ್ನು ಸ್ವಚ್ಛಗೊಳಿಸುವಂತೆ ಐಟಿಸಿ ಕಂಪನಿ ಅವರಿಗೆ ತರಾಟೆ ತೆಗೆದುಕೊಂಡರು.
ಪಶುಸಂಗೋಪನಾಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ
ಸತೀಶ್ ಬೀಟ್ ಫಾರೆಸ್ಟ್, ಸಂತೋಷ, ವೀರೇಶ್, ಮತ್ತಿತರರು ಹಾಜರಿದ್ದರು.