ಪ್ರಕಾಶ ಕಮ್ಮಾರಗೆ ಛಾಯಾಶ್ರೀ ಪ್ರಶಸ್ತಿ
ಮುನವಳ್ಳಿ,ಸೆ.23: ತಾಲೂಕಾ ಪೋಟೋಗ್ರಾಪರ&ವಿಡಿಯೋಗ್ರಾಪರ ಸಂಘದ ಮಾಜಿ ಕಾರ್ಯದರ್ಶಿ,ಛಾಯಾಗ್ರಾಹಕ ಮತ್ತು ಪತ್ರಕರ್ತರಾದ ಪ್ರಕಾಶ ಕಮ್ಮಾರ ಅವರಿಗೆ ಹಲವಾರು ವರ್ಷಗಳ ಛಾಯಾಗ್ರಹಣ ಕ್ಷೇತ್ರ ಮತ್ತು ಸಮಾಜ ಸೇವೆ ಪರಿಗಣಿಸಿ ಕರ್ನಾಟಕ ಫೋಟೋಗ್ರಾಫಿ ಅಸೋಸಿಯೇಷನ್ ಬೆಂಗಳೂರು ಇವರಿಂದ ಕೊಡಮಾಡುವ ರಾಜ್ಯಮಟ್ಟದ ಛಾಯಾಶ್ರೀ ಪ್ರಶಸ್ತಿ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಕರ್ನಾಟಕ ಪೋಟೋಗ್ರಾಫಿ ಅಸೋಸಿಯೇಷನ್ ದಶಮಾನೋತ್ಸವ ಮತ್ತು ಡಿಜಿ ಇಮೇಜ 2024 ರ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ್ಯ ಎಚ್ ಎಸ್ ನಾಗೇಶ, ರಾಜ್ಯಕಾರ್ಯದರ್ಶಿ ಎ ಎಂ ಮುರಳಿ, ನಿರ್ದೇಶಕ ಮಲ್ಲಿಕಾರ್ಜುನ ಕೆಆರ್, ಬೆಳಗಾವಿ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ರಾಮಣ್ಣವರ, ನಿರ್ದೇಶಕ ಭವಿಷ ಈಟಿ, ಬೈಲಹೊಂಗಲ ಸಂಘದ ತಾಲೂಕಾಅಧ್ಯಕ್ಷ ರಾಜು ಚಿತ್ರಗಾರ, ಉಪಾಧ್ಯಕ್ಷ ನಾಗರಾಜ ಭಾವಿಕಟ್ಟಿ, ಚನ್ನಪ್ಪ ಪನದಿ, ಈರಣ್ಣ ಪ್ರಭುನವರ, ಬಸವರಾಜ ಹುಕ್ಕೇರಿ, ಶಿವು ಅಬ್ಬಾರ ಮುಂತಾದವರು ಉಪಸ್ಥಿತರಿದ್ದರು.