ನವ್ಯಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ಬಡ ವ್ಯಾಪಾರಿಗಳಿಗೆ ಆಶಾಕಿರಣವಾಗಿದೆ: ಪ್ರಭುಸ್ವಾಮಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.23- ನವ್ಯಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರದ ಸಂಘ ಬಡ ವ್ಯಾಪಾರಿಗಳಿಗೆ ಆಶಾಕಿರಣವಾಗಿದೆ ಎಂದು ಮಾಜಿ ಲಯನ್ಸ್ ಅಧ್ಯಕ್ಷ ಹಾಗೂ ನವ್ಯಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿರ್ದೇಶಕ ಬಿ.ಎಂ.ಪ್ರಭುಸ್ವಾಮಿ ತಿಳಿಸಿದರು.
ಅವರು ನಗರದ ರೋಟರಿ ಭವನದ ಹಿಂಭಾಗದಲ್ಲಿಇರುವ ಮಹಾಮನೆ ಸಭಾಂಗಣದಲ್ಲಿ ನವ್ಯ ಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರದ ಸಂಘ ನಿಯಮಿತದ 14ನೇ ವರ್ಷದ ವಾರ್ಷೀಕೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ನಂತರ ಮಾತನಾಡಿದ ಅವರು ನಾವು ಮಾಡುವ ಸೇವೆಗಳನ್ನು ಸಮಾಜಸೇವೆ ಎನ್ನುತೇವೆ. ನವ್ಯಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬಡ ವ್ಯಾಪಾರಿಗಳಿಗೆ ಆಶಾಕಿರಣವಾಗಿದೆ. ಒಂದು ಸಂಸ್ಥೆಯನ್ನು ನಡೆಸುವುದು ಸುಲಭದ ಕೆಲಸವಲ್ಲ ಪ್ರತಿಯೊಬ್ಬರ ಸಹಕಾರ ಬಹಳ ಮುಖ್ಯ, ಈ ಸಂಸ್ಥೆಯು ಉತ್ತಮ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಪ್ರತಿಭಾ ಪುರಸ್ಕಾರ, ಆರೋಗ್ಯತಪಾಸಣೆ ಹಾಗೂ ಇನ್ನು ಮುಂತಾದ ಸೌಕರ್ಯಗಳನ್ನು ನಮ್ಮ ಸಂಸ್ಥೆ ವತಿಯಿಂದ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, ನÀವ್ಯಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಹಕಾರ ಸಂಘದ ಪ್ರತಿವರ್ಷವು ಸದಸ್ಯರ ಸಂಖ್ಯೆಯನ್ನು ಹೆಚ್ಚಿಕೊಳ್ಳುತ್ತಿದೆ ಬರುವ ವರ್ಷದಲ್ಲಿ 2000 ಸದಸ್ಯರನ್ನು ನೊಂದಣಿ ಮಾಡುವುದು ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.
ನಮ್ಮ ಸಹಕಾರಿಯು ನಮ್ಮ ಸದಸ್ಯರ ಪ್ರತಿಯೊಬ್ಬರ ಆಸ್ತಿಯಾಗಿದೆ. ಪ್ರತಿಯೊಬ್ಬರೂ ಉತ್ತೇಜನ ದಿಂದ ಕೆಲಸ ಮಾಡುತ್ತಿದ್ದಾರೆ.. ಸಂಸ್ಥೆಯು ಜಿಲ್ಲೆಗೆ ಮಾದರಿಯಾಗಿದೆ. ನವ್ಯಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘವು ಚಾಮರಾಜನಗರ ತಾಲ್ಲೂಕಿಗೆ ಪ್ರಥಮ ಸಹಕಾರಿಯಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ. ಈಭಾರಿ 2 ಲಕ್ಷ ಲಾಭ ಗಳಿಸುವಲ್ಲಿ ಸಂಸ್ಥೆಯಯ ಯಶಸ್ವಿಯಾಗಿದೆ. ಸದಸ್ಯರು ಕುಂದು ಕೊರತೆಯ ಬಗ್ಗೆ ಗಮನವರಿಸಿ ಅವರಿಗೆ ಅನುಕೂಲಮಾಡುವುದೆ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
…ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಂಜು. ಎಸ್ ಹರವೆ, ಅರುಣ.ಎಸ್, ಬಸವಣ್ಣ. ಎಸ್.ಪಿ, ಕರುಣಾಕರ. ಕೆ.ಎಸ್, ಮಹೇಶ್. ಎಂ. ಪ್ರಕಾಶ್.ಡಿ.ಪಿ, ಪ್ರಭುಸ್ವಾಮಿ, ನಿರ್ದೇಶಕರಾದ ಬಸವಣ್ಣ, ಮಂಜುಹರವೆ, ಪ್ರಭುಸ್ವಾಮಿ, ರತ್ನಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಶಿವಕುಮಾರ್ ಉಪಸ್ಥಿತರಿದ್ದರು.