ದಾನಗಳಲ್ಲಿ ರಕ್ತದಾನ,ಅನ್ನದಾನ ಹಾಗೂ ವಿದ್ಯಾದಾನ ಶ್ರೇಷ್ಠ
ತಾಳಿಕೋಟೆ:ಸೆ.೨೩:ನೀರ್ಗತಿಕರಿಗೆ ಬಡಬಗ್ಗರಿಗೆ ದಾನ ಮಾಡಬೇಕಾದರೇ ರಕ್ತದಾನ,ವಿದ್ಯಾದಾನ,ಭೂದಾನ,ಅನ್ನದಾನ ಇವುಗಳು ಶ್ರೇಷ್ಠವಾದವುಗಳನ್ನು ಮೊದಲು ದಾನಮಾಡಿದರೇ ದಾನ ಶೂರ ಕರ್ಣನ ಆ ಸ್ಥಾನಕ್ಕೆ ಮುಟ್ಟಲು ಸಾಧ್ಯವೆಂದು ಶ್ರೀ ಖಾಸ್ಗತೇಶ್ವರ ಮಠದ ಉಸ್ಥುವಾರಿಯಾದ ವೇ.ಮುರುಗೇಶ ವೀರಕ್ತಮಠ ಅವರು ನುಡಿದರು.
ರವಿವಾರರಂದು ಶ್ರೀ ಖಾಸ್ಗತೇಶ್ವರ ಶ್ರೀಗಳ ೧೨೮ನೇ ಹಾಗೂ ಶ್ರೀ ವೀರಕ್ತ ಮಹಾಸ್ವಾಮಿಗಳ ೧೦ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಶ್ರೀ ಖಾಸ್ಗತ ಮಠದಲ್ಲಿ ವಿಜಯಪೂರದ ಶಿವಗಿರಿರಕ್ತ (ನಿಧಿ) ಕೇಂದ್ರದ ವತಿಯಿಂದ ಏರ್ಪಡಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಈ ಹಿಂದಿನಿAದಲೂ ಶ್ರೀ ಖಾಸ್ಗತ ಮಠದಲ್ಲಿ ಅನ್ನದಾನ ಹಾಗೂ ವಿದ್ಯಾದಾನ ಇವೆರಡನ್ನು ಮಾಡುತ್ತಾ ಸಾಗಿ ಬರಲಾಗಿದೆ ಆದರೆ ರಕ್ತದಾನವೆಂಬುದು ಬಡಬಗ್ಗರಿಗೆ ಹಾಗೂ ನಿರ್ಗತಿಕರಿಗೆ ಆಪತ್ತಕಾಲದಲ್ಲಿ ಸಹಾಯವಾಗಲಿ ಎಂಬ ಉದ್ದೇಶದಿಂದ ರಕ್ತದಾನ ಮಾಡುವಂತಹ ಕಾರ್ಯ ಒಳ್ಳೇಯ ಹಾಗೂ ರೋಗಿಗಳಿಗೆ ಸ್ಪಂದಿಸುವAತಹ ಕಾರ್ಯ ಮಾಡುವ ರಕ್ತಬಂಡಾರದ ರಕ್ತನಿಧಿ ಕೇಂದ್ರಗಳ ಸಂಯೋಗದೊAದಿಗೆ ಈ ಕಾರ್ಯ ನಡೆಸಲು ಕಾರಣವಾಗಿದೆ ಎಂದರು. ಅನೇಕ ಜನರು ಗ್ರಾಮಾಂತರ ನಗರ ಪಟ್ಟಣಗಳಲ್ಲಿಯೂ ಉಚಿತವಾಗಿ ಭೂದಾನವನ್ನು ಮಾಡಿ ಶ್ರೇಯಸ್ಸನ್ನು ಕೇಲವರು ಪಡೆದವರಾಗಿದ್ದಾರೆ ಅಂತಹ ಕಾರ್ಯವೂ ನಮ್ಮ ಭಾಗದಲ್ಲಿ ನಡೆಯಲಿ ಎಂದು ಆಶೀಸಿದ ಅವರು ಎಲ್ಲದಾನಗಳಲ್ಲಿ ರಕ್ತದಾನ, ಅನ್ನದಾನ,ಭೂದಾನ, ವಿದ್ಯಾದಾನ ಇವುಗಳು ಶ್ರೇಷ್ಠವುಗಳಾಗಿವೆ ಎಂದರು.
ಇನ್ನೋರ್ವ ವಿಜಯಪುರದ ಶಿವಗಿರಿ ರಕ್ತನಿಧಿ ಕೇಂದ್ರದ ಅಧ್ಯಕ್ಷರಾದ ಸುನೀಲ ಚವ್ಹಾಣ ಅವರು ಮಾತನಾಡಿ ರಕ್ತದಾನ ಮಾಡುವುದರಿಂದ ಶೇಕಡಾ ೮೦ರಷ್ಟು ಹೃದಯಾಘಾತ ಆಗುವುದನ್ನು ತಡೆಹಿಡಿಯಬಹುದು ರಕ್ತದಾನದಿಂದ ಕೊಲೆಸ್ಟಾçಲ್ ಎಂಬುದು ಕಡಿಮೆಯಾಗುತ್ತದೆ ಎಂದರು. ಒಬ್ಬರು ಮಾಡಿದ ರಕ್ತದಾನದಿಂದ ಸುಮಾರು ಮೂರು ಜನರ ಜೀವ ಉಳಿಸುವ ಕಾರ್ಯವಾಗಬಹುದು ಇದು ಪುಣ್ಯದ ಕಾರ್ಯವಾಗಿದೆ ರಕ್ತದಾನ ಮಾಡುವುದರಿಂದ ಪ್ರಪಂಚದಲ್ಲಯೇ ಮಾನವನಲ್ಲಿ ಹುಟ್ಟುತ್ತೀರುವ ರಕ್ತ ಬೇರೆಯಾವ ಪ್ಯಾಕ್ಟರಿಯಲ್ಲಿ ತಯಾರಾಗುವಂತಹ ವಸ್ತು ಅಲ್ಲ ಆದಷ್ಟು ಎಲ್ಲರೂ ೧೮ವರ್ಷ ಮೇಲ್ಪಟ್ಟು ೬೦ವರ್ಷ ಒಳಗಿನವರು ಆರೋಗ್ಯವಂತರಾಗಿರುವವರು ರಕ್ತದಾನ ಮಾಡಬಹುದಾಗಿದೆ ಎಂದರು. ಪುರುಷರಾದವರು ೩ ತಿಂಗಳನAತರ ಪುನಃ ರಕ್ತದಾನ ಮಾಡಬಹುದು ಮಹಿಳೆಯರು ಸಹ ೪ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದರು.
ಇನ್ನೋರ್ವ ಮುಖ್ಯಅಥಿತಿಗಳಾಗಿ ಆಗಮಿಸಿದ ಖ್ಯಾತ ಔಷದ ವ್ಯಾಪಾರಿಗಳಾದ ರಮೇಶ ಸಾಲಂಕಿ ಅವರು ಮಾತನಾಡಿ ವಿಜಯಪುರದ ಶೀವಗಿರಿ ರಕ್ತನಿಧಿ ಕೇಂದ್ರ ಇಂದು ಏರ್ಪಡಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಾದರಿಯ ಶಿಬಿರವಾಗಿದೆ ಏಕೆಂದರೆ ಈ ಕೇದ್ರದ ವತಿಯಿಂದ ಎಚ್.ಆಯ್.ವಿ ಹಾಗೂ ತಲಿಸಿಮಿಯಾ ರೋಗಿಗಳಿಗೆ ಇನ್ನಿತರ ರೋಗಗಳಿಗೆ ಸಂಭದಿಸಿದ ರೋಗಿಗಳಿಗೆ ಉಚಿತವಾಗಿ ರಕ್ತ ನೀಡುತ್ತಾ ಸಾಗಿ ಬಂದಿರುವುದು ಗುಣಗಾನ ಮಯವಾಗಿದೆ ಈ ಕೇಂದ್ರ ೨೪ ಗಂಟೆಗಳ ಕಾಲ ತನ್ನ ಸೇವಾಕಾರ್ಯದಲ್ಲಿ ಇರುತ್ತದೆ ಎಂಬ ಕೇಂದ್ರದ ಅಧ್ಯಕ್ಷರು ಹೇಳಿರುವುದು ಸ್ವಾಗತಮಯವಾಗಿದೆ ಎಂದು ಹೇಳಿದ ಸಾಲಂಕಿಯವರು ಯಾರಿಗಾದರು ರಕ್ತದ ಅವಶ್ಯಕತೆ ಇದ್ದಲ್ಲಿ ವಿಜಯಪುರದ ಶಿವಗಿರಿ ರಕ್ತನಿಧಿ ಕೇಂದ್ರದೊAದಿಗೆ ಸಂಪರ್ಕಿಸಬಹುದಾಗಿದೆ ಎಂದು ಆ ಕೇಂದ್ರದ ಸಂಬಧಿತ ದೂರವಾಣಿ ಸಂಖ್ಯೆ ೦೮೩೫೨-೩೫೨೦೧೩ ಯನ್ನು ತಿಳಿಸಿದರು.
ಈ ಸಮಯದಲ್ಲಿ ರಕ್ತದಾನ ಮಾಡಿದವರಿಗೆ ಸಂಸ್ಥೆಯವತಿಯಿAದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಇದೇ ಸಮಯದಲ್ಲಿ ರಾಜು ಅಲ್ಲಾಪುರ, ಕಾಶಿನಾಥ ಶಹಾಪೂರ, ಕಾಶಿನಾಥ ವಿಭೂತಿ, ಜಟ್ಟö್ಯಪ್ಪ ಪೂಜಾರಿ, ಕಾಶಿನಾಥ ಪಾಟೀಲ, ಮಲ್ಲು ಗೊಗಿ ಹಾಗೂ ಶಿವಗಿರಿ ರಕ್ತನಿಧಿ ಕೇಂದ್ರದ ಟೆಕನಿಶನ್‌ರಾಧ ವಾಸುದೇವ ನಾಯಕ, ಕಾಶಿನಾಥ ನಾಯಕ ಹಾಗೂ ನರ್ಸಿಂಗ್ ಸ್ಟಾಪಿನ ಕುಮಾರಿ ಸ್ವಾತಿ, ಶಿವಗಂಗಾ ಮೊದಲಾದವರು ಉಪಸ್ಥಿತರಿದ್ದರು.