ಹಿಂದಿ ಅತ್ಯಂತ ಮಧುರ ಹಾಗೂ ಸರಳ ಭಾಷೆ: ಸುಗಾರೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೩:ಹಿಂದಿ ಭಾಷೆ ದೇಶದ ಉದ್ದಗಲದ ಜನರನ್ನು ಜೋಡಿಸುವ ಸಂಪರ್ಕ ಭಾಷೆಯಾಗಿ ಬೆಳೆದಿದೆ. ಹಿಂದಿ ಅತ್ಯಂತ ಮಧುರ ಹಾಗೂ ಸರಳಭಾಷೆಯಾಗಿದ್ದು, ಪ್ರಸ್ತುತ ಮಧ್ಯಪ್ರದೇಶದಲ್ಲಿ ಹಿಂದಿ ಭಾಷೆಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾಗಿದ್ದು ಭಾಷೆಯ ಜನಪ್ರಿಯತೆಯನ್ನು ಇನ್ನಷ್ಟು ದೃಢಗೊಳಿಸಿದೆ ಎಂದು ವಿಜಯಪುರ ಸಕಾ
ðರಿ ಪದವಿ ಮಹಾ ವಿದ್ಯಾಲಯದ ಹಿಂದಿ ವಿಭಾಗದ ಉಪನ್ಯಾಸಕಿ ಮಹಾದೇವಿ ಸುಗಾರೆ ಹೇಳಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಕವಲಗಿಯ ಸಂಗನಬಸವ ವಸತಿ ಪದವಿ ಪೂರ್ವಕಾಲೇಜಿನಲ್ಲಿ ಆಯೋಜಿಸಿದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಹಿಂದಿ ಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರು ಹೆಚ್ಚು ಹೆಚ್ಚಾಗಿ ಹಿಂದಿ ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ, ಪ್ರಾಚಾರ್ಯ ಹೇಮಂತ್ ಕೃಷ್ಣ ಅವರು ಮಾತನಾಡಿ, ಹಿಂದಿ ಭಾಷೆ ಭಾವನೆಗಳನ್ನು ಜೋಡಿಸುವ ಭಾಷೆಯಾಗಿದೆ. ಈ ಹಿಂದೆ ರೇಡಿಯೋದಲ್ಲಿ ಬಿತ್ರ‍್ತಿಸುತ್ತಿದ್ದ ಅಮಿನ್ ಸಯಾನಿಯವರು ನಡೆಸಿಕೊಡುತ್ತಿದ್ದ ಗೀತಮಾಲಾ ಎಂಬ ಕಾರ್ಯಕ್ರಮವನ್ನು ನೆನೆದರು.
ಹಿಂದಿ ದಿವಸದ ಅಂಗವಾಗಿ ಈ ಮೊದಲೇ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಗನಬಸವ ವಸತಿ ಶಾಲೆಯ ಉಪ ಪ್ರಾಚಾರ್ಯ ಅಣ್ಣಪ್ಪ ಶಿರೂರ, ಶಾಲಾ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ, ಇತರ ಸಿಬ್ಬಂದಿಗಳು ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ, ಚೇರ್ಮನ್ ಬಸಯ್ಯ ಹಿರೇಮಠ, ಹಾಗೂ ಆಡಳಿತ ಮಂಡಳಿಯ ಸದಸ್ಯರು ಶುಭ ಹಾರೈಸಿದರು.