ಆರೈಕೆ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧೬: ಅಂತರಾಷ್ಟ್ರೀಯ ದಾದಿಯರ  ದಿನಾಚರಣೆಯನ್ನು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು ನಮ್ಮ ನರ್ಸ್ ಗಳು ನಮ್ಮ ಭವಿಷ್ಯ ಎಂಬ ಸಂದೇಶದ ಅಡಿ ಸಂದೇಶ ದಾಡಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ವೇಳೆ ಆರೈಕೆ ಸೂಪರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಟಿ ಜಿ ರವಿಕುಮಾರ್ಮಾತನಾಡಿ ಅಂತರಾಷ್ಟ್ರೀಯ ದಾದಿಯರ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು ಈ ಸಮಯದಲ್ಲಿ ಫ್ಲಾರೆನ್ಸ್ ನೈಟಿಂಗೇಲ್  ತಮ್ಮ ವೃತ್ತಿಯಲ್ಲಿ ‘ಲೇಡಿ ವಿತ್ ಲ್ಯಾಂಪ್ ‘ ಎಂದು ಏಕೆ ಕರೆಯುತ್ತಾರೆ ಎಂದು ತಿಳಿಸಿಕೊಟ್ಟರು.ವಿಶ್ವಯುದ್ಧದ ಸಂದರ್ಭದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ರಾತ್ರಿಯ ಸಮಯದಲ್ಲಿ ತಮ್ಮ ನರ್ಸಿಂಗ್ ಸೇವೆಯನ್ನು ನೀಡಿ ಆಧುನಿಕ ಪ್ರಪಂಚಕ್ಕೆ ತಮ್ಮ ಕೊಡುಗೆ ಯಾವ ರೀತಿ ಇರಬೇಕು ಎಂಬುದನ್ನು ತೋರಿಸಿಕೊಟ್ಟರು ಯಾವುದೇ ಆಸ್ಪತ್ರೆ, ಉತ್ತಮ ಸೇವೆಯನ್ನು ನೀಡಲು ನರ್ಸ್ ಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.ಈ ಸಮಯದಲ್ಲಿ ಜಗಳೂರು ಮಾಜಿ ಶಾಸಕರಾದ ಮತ್ತು ಆರೈಕೆ ಗ್ರೂಪ್ಸ್ ನ ಅಧ್ಯಕ್ಷರಾದ ಟಿ ಗುರುಸಿದ್ದನಗೌಡ್ರು,  ಶ್ರೀಮತಿ ರೂಪ ಎಚ್ ಕೆ ನರ್ಸಿಂಗ್ ಸೂಪರ್ಡೆಂಟ್ ಆರೈಕೆ ಹಾಸ್ಪಿಟಲ್ ಅವರ ನಿಸ್ವಾರ್ಥ ಸೇವೆಗೆ ಅವರನ್ನು ಸನ್ಮಾನಿಸಲಾಯಿತು  ಹಾಗೂ ಆಸ್ಪತ್ರೆಯ ಎಲ್ಲಾ ವೈದ್ಯರ ತಂಡ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.