ಶಂಕರ ಜಯಂತಿ ಭವ್ಯ ಮೆರವಣಿಗೆ

ಸಂಜೆವಾಣಿ ವಾರ್ತೆ
ಹಿರಿಯೂರು. ಮೇ.16; ನಗರದ ಶಂಕರ ಮಠದಲ್ಲಿ ಶಂಕರ ಜಯಂತಿ ಅಂಗವಾಗಿ ಬ್ರಾಹ್ಮಣ ಸಮಾಜದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಬೆಳಿಗ್ಗೆ ಶ್ರೀ ಶಂಕರಾಚಾರ್ಯರು ಹಾಗೂ ಶಾರದ ಮಾತೆಯರ ಉತ್ಸವ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಯುದ್ದಕ್ಕೂ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮತ್ತು ಶ್ರೀಮತಿ ಕೃಷ್ಣ ಕುಮಾರಿ ಮತ್ತು ತಂಡದವರು  ಶಂಕರಭಜನೆ ದೇವರ ನಾಮ ಸಂಕೀರ್ತನೆಗಳನ್ನು ಹಾಡುತ್ತಾ ಸಾಗಿ ಬಂದರು.  ಮೆರವಣಿಗೆಯು ಶಂಕರ ಮಠದಿಂದ ಹೊರಟು ಹುಳಿಯಾರು ರಸ್ತೆ ಪ್ರಧಾನ ರಸ್ತೆ ದುರ್ಗೀಗುಡಿ ರಸ್ತೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಸ್ವಾಮಿನಾಥ್ , ಕಾರ್ಯದರ್ಶಿ ವೆಂಕಟೇಶ್  ದೀಕ್ಷಿತ್  ಹಾಗೂ ಸದಸ್ಯರು ಮತ್ತುಭಕ್ತರು ಪಾಲ್ಗೊಂಡಿದ್ದರು.