ಮಳೆಗೆ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.16: ರಾಜ್ಯದಲ್ಲಿ ಕೆಲ ಕಡೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಬರದಿಂದ ಬೇಸತ್ತು, ಮಳೆಗಾಗಿ ದೇವರ ಪೂಜೆ ಜೊತೆ ಮೂಡನಂಬಿಕೆಗಳ ಮೊರೆ ಹೋಗಿದ್ದಾರೆ. ಅದರಂತೆ ಜಿಲ್ಲೆಯಲ್ಲೂ ಕೂಡ ರೈತರು ಮಳೆಗಾಗಿ ಮೂಡನಂಬಿಕೆಯ ಮೊರೆಹೋಗಿದ್ದು, ಮಳೆಗಾಗಿ ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಿಸಿ ಮೆರವಣಿಗೆ ಮಾಡಿದ್ದಾರೆ.ಕಳೆದ ಹಲವು ತಿಂಗಳುಗಳಿAದ ಮಳೆ ಇಲ್ಲದೆ ಬರದಿಂದ ರೈತರು ಜನ, ಜಾನುವಾರಗಳು ತತ್ತರಿಸಿ ಹೋಗಿದ್ದರು. ಕುಡಿಯುವ ನೀರಿಗೂ ಕೂಡ ಪರದಾಡುವ ಸ್ಥಿತಿ ತಲುಪಿದೆ. ಅಲ್ಲದೆ ಸುತ್ತಾಮುತ್ತ ಮಳೆಯಾಗುತ್ತಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಬರದ ಛಾಯೆ ಆವರಿಸಿದೆ. ಅದ್ದರಿಂದ ಇಂದು ಹೊಳೆ ಸಿರಿಗೆರೆ ಗ್ರಾಮದಲ್ಲಿ ಕತ್ತೆಗಳಿಗೆ ಮದುವೆ ಮಾಡಿಸಿ ವರುಣ ದೇವನಲ್ಲಿ ಪ್ರಾರ್ಥನೆ ಸಲ್ಲಿಸಿದರು.ಎರಡು ಕತ್ತೆಗಳಿಗೆ ಮದುಮಕ್ಕಳಂತೆ ಅಲಂಕಾರ ಮಾಡಿ ಶ್ರೀ ಯೋಗಿ ನಾರೇಯಣ ದೇವಸ್ಥಾನದಲ್ಲಿ ಶಾಸ್ರೋಕ್ತವಾಗಿ ವಿವಾಹ ಕಾರ್ಯ ನೆರವೇರಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿ ಗ್ರಾಮಸ್ಥರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಇನ್ನು ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆಯಾಗುತ್ತದೆ ಎನ್ನುವ ನಂಬಿಕೆ ಇದ್ದು, ಬರದಿಂದ ತತ್ತರಿಸಿದ ಜನರು ಈ ಕಾರ್ಯವನ್ನು ಕೂಡ ಮಾಡಿದ್ದಾರೆ