ಬಡವರ ಆರೈಕೆ ಮಾಡಿದ ಮೊದಲ ಮಹಿಳೆ ಫ್ಲಾರೆನ್ಸ್ ನೈಟಿಂಗೆಲ್
ಚನ್ನಪಟ್ಟಣ, ಮೇ.೧೬- ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ತನ್ನಚಿಕ್ಕ ವಯಸ್ಸಿನಲ್ಲಿಯೇ ಬಡವರ್ಗದ ಜನರಿಗೆ ಅದರಲ್ಲೂ ಮಾರಕರೋಗ, ರುಜೀನಗಳಿಗೆ ತುತ್ತಾದವರಿಗೆ ಯಾವುದೇ ರೀತಿಯ ಅಸಹ್ಯ ಪಟ್ಟುಕೊಳ್ಳದೆ ಆರೈಕೆ ಮಾಡಿದ ಮೊಟ್ಟ ಮೊದಲ ಶೂಷ್ರೂಷಕಿ ದೀಪದ ಮಹಿಳೆ ಫ್ಲಾರೆನ್ಸ್ ನೈಟಿಂಗೆಲ್ ಎಂದು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಜಗದೀಶ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಭಾಂಗಣದಲ್ಲಿ ಆಯೋಜನೆಮಾಡಲಾಗಿದ್ದ ದೀಪದ ಮಹಿಳೆ ಪ್ಲಾರೆನ್ಸ್ ನೈಂಟಿಗೆಲ್ ಜನ್ಮದಿನದ ವಿಶ್ವದಾದಿಯರ ದಿನಚರಣೆಯನ್ನು ಅವರ ಭಾವಚಿತ್ರಕ್ಕೆ ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವೈದ್ಯರು ರೋಗಿಗಳನ್ನು ಪರೀಕ್ಷೆ ಮಾಡಿಅವರಿಗೆ ಬೇಕಾದ ಔಷದಿಗಳನ್ನು ನಿಡುವಂತೆ ಹೇಳುತ್ತಾರೆ ಆದರೆ ದಿನದ ೨೪ ತಾಸುಗಳು ಕೂಡ ಸಂಬಧಿಸಿದ ರೋಗಿಯ ಜೊತೆ ಒಡನಾಟದಲ್ಲಿರುವ ಶೂಷ್ರೂಷಕೀಯರು ತಮ್ಮ ಕುಟುಂಬವನ್ನು ಮೆರೆಯುವುದಲ್ಲದೆ ತಮ್ಮ ಆರೋಗ್ಯವನ್ನು ಲಕ್ಕಿಸದೆ ಪ್ರಾಮಾಣಿಕೆತೆಯಿಂದ ಸೇವೆ ಸಲ್ಲಿಸುವುವರು ಶೂಷ್ರೂಷಕೀಯರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಸಾರ್ವಜನಿಕಆಸ್ಪತ್ರೆಯ ನೀವೃತ್ತ ಶೂಷ್ರೂಷಕೀಯರಅಧೀಕ್ಷಕಿ ರತ್ನಮ್ಮ, ಮಾರಕರೋಗಕ್ಕೆ ತುತ್ತಾದ ವ್ಯಕ್ತಿಯೊರ್ವನಿಗೆ ವೈದ್ಯಕೀಯ ಸೇವೆ ನೀಡಿಆರೈಕೆ ಮಾಡಿದ ನಡೆದಾಡುವ ದೇವತೆಯಾಗಿದ್ದ ದೀಪದ ಮಹಿಳೆ ಶೂಷ್ರೂಷಕಿ ಪ್ಲಾರೆನ್ಸ್ ನೈಂಟಿಗೆಲ್ ವಿಶ್ವಕ್ಕೆ ಮಾದರಿ ಎಂದರು.
ಅವರ ಆದರ್ಶ ತತ್ವಗಳೇ ಇಂದಿನ ಶೂಷ್ರೂಷಕೀಯರಿಗೆ ಮಾರ್ಗದರ್ಶನವಾಗಿದೆ, ಬಿಟೀಷರ ಕಾಲದಲ್ಲಿ ಜನಿಸಿದ ಅವರುಅದರಲ್ಲೂ ಆಗರ್ಭ ಶ್ರೀಮಂತ ಕುಟುಂಬದವರಾದರೂ ವ್ಯವಾಹಿಕ ಜೀವನ, ಹಣ,ಆಸ್ತಿ,ಸಂಪತ್ತು,ಬಂದುಬಳಗಕ್ಕೆ ಆದ್ಯತೆ ನೀಡದೆ ಸಮಾಜದಲ್ಲಿಅಂದರೆ ಯುದ್ದದಲ್ಲಿ ಗಾಯಗೊಂಡವರಿಗೆ ಹಾಗೂ ವಿವಿಧ ರೋಗರುಜೀನಗಳಿಂದ ಸಾವಿನ ಜೊತೆ ಸೆಣಸಾಟ ಮಾಡುತ್ತಿರುವವರನ್ನು ನೋಡಿ, ಮೊಮ್ಮಲ ಮೊರಗಿ ಅವರ ಕಷ್ಟಕ್ಕೆ ಸ್ಪಂದಿಸಿ ಅವರ ಸೇವೆಗೆ ತಮ್ಮಜಿವಿತ ಅವಧಿಯನ್ನೇ ಮುಡುಪಾಗಿಟ್ಟವರು ದೀಪದದೇವತೆ ಪ್ಲಾಎನ್ಸ್ ನೈಂಟಿಗೆಲ್ ಎಂದುಅವರುಜೀವನಚೆರಿತ್ರೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿಆಸ್ಪತ್ರೆಯ ಶೂಷ್ರೂಷಕೀಯರು ದೀಪಗಳನ್ನು ಹಚ್ಚಿ ಅರ ಸ್ಮರಣೆ ಮಾಡಿದರು, ವೇದಿಕೆಯ ಮೇಲೆ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಮಂಜೇಶ್‌ಕುಮಾರ್, ವೈದ್ಯರುಗಳಾದ ಡಾ. ರಾಜ್‌ಕುಮಾರ್, ಡಾ. ಅಮರೇಶ್, ಆಸ್ಪತ್ರೆಯ ಹಿರಿಯ ಪಾರ್ಮಸಿ ಅಧಿಕಾರಿ ವೇದಮೂರ್ತಿ ಹಾಗೂ ಆಸ್ಪತ್ರೆಯ ಶೂಷ್ರೂಷಕೀಯರ ಅದೀಕ್ಷಕರಾದ ಸರಸ್ವತಿ, ಬ್ರದರ್ ಸ್ವಾಮಿ ಹಾಗೂ ಹಲವಾರು ಮಂದಿ ಹಾಜರಿದ್ದರು.