ನೊಂದ ಜನತೆಗೆ ರೋಟರಿ ಸಂಸ್ಥೆ ನಂದಾದೀಪ: ಶ್ರೀನಿವಾಸ ಮೂರ್ತಿ
ವಿಜಯಪುರ, ಮೇ. ೧೬- ಪಟ್ಟಣದ ರೋಟರಿ ಸಂಸ್ಥೆಯು ಕಳೆದ ೫೦ ವರ್ಷಗಳಿಂದ ನೂರಾರು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಾಗೂ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ, ನೂರಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು, ನೊಂದು-ಬೆಂದವರ, ದಾರಿ ಕಾಣದವರ, ದಾರಿದೀಪವಾಗಿ ಅವರಿಗೆ ನಂದಾದೀಪವಾಗಿದೆ ಎಂದು ೩೧೯೨ ಜಿಲ್ಲಾ ಗೌರ್ನರ್ ವಿ.ಶ್ರೀನಿವಾಸ್ ಮೂರ್ತಿ ತಿಳಿಸಿದರು.
ಅವರು ಇಲ್ಲಿನ ಸುಬ್ಬಮ್ಮ ಚೆನ್ನಪ್ಪ ಸಮುದಾಯ ಭವನದಲ್ಲಿ ವಿಜಯಪುರ ರೋಟರಿ ಸಂಸ್ಥೆಗೆ ೫೦ ವರ್ಷಗಳ ಕಾಲ ತುಂಬಿದ ಸಂದರ್ಭದಲ್ಲಿ ರೋಟರಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿಂದಿನ ಜಿಲ್ಲಾ ಗವರ್ನರ್ ಎಸ್.ನಾಗೇಂದ್ರರವರು ಮಾತನಾಡುತ್ತಾ, ವಿಜಯಪುರ ರೋಟರಿ ಸಂಸ್ಥೆಯು ಐದು ವಿಷಯಗಳಿಗೆ ಹೆಸರುವಾಸಿಯಾಗಿದ್ದು, ಸರ್ವಿಸ್, ಫೆಲೋಶಿಪ್, ಡೈವರ್ಸಿಟಿ, ಇಂಟಿಗ್ರಿಟಿ, ಲೀಡರ್ಶಿಪ್ ನಿರ್ಮಿಸಿಕೊಂಡು ಬಂದಿದ್ದು, ಇಲ್ಲಿನ ಸಂಸ್ಥೆಯು ನೂರಾರು ಕಣ್ಣಿನ ತಪಾಸಣಾ ಶಿಬಿರಗಳನ್ನು ಏರ್ಪಡಿಸಿದ್ದುದಲ್ಲದೆ, ಸಾವಿರಾರು ಮಂದಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿದ್ದು, ಸರಕಾರಿ ಶಾಲೆಗಳಿಗೆ ಅವಶ್ಯಕವಿರುವ ಪೀಠೋಪಕರಣ ಹಾಗೂ ಕಲಿಕೋಪಕರಣಗಳನ್ನು ನೀಡಿದ್ದು, ಈ ಸಾಲಿನಲ್ಲಿ ಹಲವಾರು ಅಂಗನವಾಡಿ ಕಟ್ಟಡಗಳ ಪುನರುದ್ದಾರ ಮಾಡಿದ್ದು, ಇಲ್ಲಿನ ಸಂಸ್ಥೆಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು, ಐವತ್ತು ವರ್ಷಗಳ ಹಿಂದೆ ಸಂಸ್ಥಾಪಕ ಸದಸ್ಯರುಗಳಾಗಿ ಬಂದ ಸದಸ್ಯರುಗಳು ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಹಾಗೂ ಇಂದಿಗೂ ಸಹ ಸದಸ್ಯರುಗಳಾಗಿಯೇ ಮುಂದುವರೆಯುತ್ತಿರುವುದು ಇಲ್ಲಿನ ಸ್ನೇಹಭಾವದ ಪ್ರತೀಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷರಾದ ಎ.ಎಂ ಮಂಜುಳಾ ರವರು ಮಾತನಾಡಿ, ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ತಾವು ಅಧ್ಯಕ್ಷರಾಗಿರುವುದಲ್ಲದೆ, ಹಲವಾರು ಗುರುತಿಸಲ್ಪಡುವಂತಹ ಸೇವಾ ಕಾರ್ಯಗಳನ್ನು ಮಾಡಿದ್ದು, ಇದೀಗ ಸುವರ್ಣ ಮಹೋತ್ಸವದ ಅಂಗವಾಗಿ ನೂತನ ಕಟ್ಟಡ ನಿರ್ಮಾಣಕ್ಕೂ ಮುಂದಾಗಿರುವುದು ತಮಗೆ ಸಂತಸದ ವಿಷಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಗಿರಿಜಾಂಬಾ ರುದ್ರೇಶ್ ಮೂರ್ತಿ, ಸುವರ್ಣ ಮಹೋತ್ಸವ ಯೋಜನಾ ಅಧ್ಯಕ್ಷರಾದ ಬಸವರಾಜು, ಸಂಚಾಲಕರಾದ ಶೈಲೇಂದ್ರಕುಮಾರ್, ಸಂಘ ಸೇವಾ ನಿರ್ದೇಶಕರಾದ ವಿ.ಎಸ್. ರವಿ, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷ ರಾದ ನವ್ಯ ನವೀನ್, ಜಿಲ್ಲಾ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷರಾದ ಆಶಾ ಶೈಲೇಂದ್ರ, ರೋಟರಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ವಿ.ಸಿ.ಸಿದ್ದರಾಜು, ಮಹೇಶ್, ಕಿರಣ್, ಸುರೇಶ್, ನಿಯೋಜಿತ ಜಿಲ್ಲಾ ಪಾಲಕರಾಗಿ ನೇಮಕಗೊಂಡಿರುವ ಬೆಂಗಳೂರಿನ ಮಹದೇವ ಪ್ರಸಾದ್, ಇಂದಿರಾ ನಗರ ಸಂಸ್ಥೆಯ ಜಗದೀಶ್, ರೋಟರಿ ಉದ್ಯೋಗ್ನ ರೇಣುಕೇಶ್ವರಸ್ವಾಮಿ, ಅಸಿಸ್ಟೆಂಟ್ ಗವರ್ನರ್ ಡಾ||ಮುರಳಿ ಕೃಷ್ಣ, ಹೈಗ್ರೌಂಡ್ಸ್‌ನ ಗೋಪೀನಾಥ್, ಜಿಲ್ಲಾ ಕಾರ್ಯದರ್ಶಿಗಳಾದ ವಿನೋದ್ ಕುಮಾರ್, ವಿಮಲ ಮಲ್ಲಪ್ಪ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥಾಪಕ ಸದಸ್ಯರುಗಳಾದ ಪಿ ಚಂದ್ರಪ್ಪ, ಆರ್ ಚೆನ್ನಪ್ಪ, ಸಿ.ಚಂದ್ರಶೇಖರ್, ಸಿ.ಬಸಪ್ಪ, ಕೆ.ಸದ್ಯೋಜಾತಪ್ಪ, ವಿ.ಸಿ.ಸಿದ್ದರಾಜುರವರುಗಳನ್ನು ಸನ್ಮಾನಿಸಲಾಯಿತು. ಸುವರ್ಣ ಸೌರಭ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.