ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ
ಗುಳೇದಗುಡ್ಡ ಮೇ.16: ಮಾಹೇಶ್ವರಿ ವಿದ್ಯಾ ಪ್ರಚಾರಕ ಮಂಡಳದ ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಪ್ರಸಕ್ತ ಸಾಲಿನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ತಮ್ಮ ಶಾಲೆಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿದ್ಯಾರ್ಥಿಯರನ್ನು ಸನ್ಮಾನಿಸಿ ಗೌರವಿಸಿದರು.
ಶಾಲೆಯ ಉಪ ಚೇರ್ಮನ ಲಕ್ಷ್ಮೀನಿವಾಸಜಿ ಕಾಬ್ರಾ, ಕಾರ್ಯದರ್ಶಿ ಗೋವಿಂದ ಬಜಾಜ, ಕಮಲಕಿಶೋರ ತಾಪಡಿಯಾ, ಶ್ರೀಕಾಂತ ಜಾಜು, ಶಾಲೆಯ ಮುಖ್ಯಾಧ್ಯಾಪಕರಾದ ಆರ್.ವಿ.ಪಾಟೀಲ ಶಿಕ್ಷಕರಾದ ವ್ಹಿ.ಕೆ.ಚರಂತಿಮಠ, ಎಚ್.ಬಿ.ಅಂಬಿಗೇರ, ಜುಗಲಕಿಶೋರ ವರ್ಮಾ, ಸಿ.ಎಸ್.ಹೊಸಮನಿ ಮತ್ತಿತರರಿದ್ದರು.