ನಮ್ಮ ಸಂಸ್ಕøತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಬೇಸಿಗೆ ಶಿಬಿರಗಳು ಆಗತ್ಯ: ಡಾ.ಎಂ.ಮಹೇಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.16-ನಮ್ಮ ಸಂಸ್ಕøತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಬೇಸಿಗೆ ಶಿಬಿರಗಳು ಆಗತ್ಯವಾಗಿವೆ ಎಂದು ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ.ಮಹೇಶ್ ಚಿಕ್ಕಲ್ಲೂರು ತಿಳಿಸಿದರು.
ನಗರದ ಸಂತಜೋಸೆಫರ ಹಿರಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆತ್ಮಿಯ ರಂಗಪ್ರಯೋಗಾಲಯ ಟ್ರಸ್ಟ್ ವತಿಯಿಂದ ನಡೆದ ಆಡುಬಾ ನನ್ನ ಕಂದ ಮಕ್ಕಳ ಬೇಸಿಗೆ ಸಮಾರೋಪ ಸಮಾರಂಭವನ್ನು ಕಂಜರ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮತನ ಬಿಂಬಿಸುವ ಅವ್ವ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ತಮ್ಮ ಎಂಬ ಪದಗಳು ಕಣ್ಮರೆಯಾಗುತ್ತಿವೆ. ಇವುಗಳ ಬದಲಾಗಿ ಮಮ್ಮಿ, ಡ್ಯಾಡಿ, ಅಂಕಲ್ ಎಂಬ ಪದಗಳು ಆವರಿಸಿಕೊಂಡಿವೆ, ಇದರಿಂದ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಆಚಾರ, ವಿಚಾರ ತಿಳಿಸಿದಂತೆ ಆಗುವುದಿಲ್ಲ. ಇವುಗಳನ್ನು ಕಲಿಸಬೇಕಾದರೆ ಬೇಸಿಗೆ ಶಿಬಿರಗಳ ಆಯೋಜನೆ ಅವಶ್ಯವಿದೆ. ಕಳೆದ 5 ವರ್ಷಗಳಿಂದ ಆತ್ಮಿಯ ರಂಗ ಪ್ರಯೋಗಾಲಯ ಟ್ರಸ್ಟ್ ಇಂತಹ ಕಾರ್ಯದಲ್ಲಿ ನಿರತವಾಗಿರುವುದು ಪ್ರಶಂಸನೀಯ, ಸಂಸ್ಥೆಯ ಬೆಳವಣಿಗೆಗೆ ಬೇಕಾದ ಸಹಕಾರವನ್ನು ಜನಪರ ಸಾಹಿತ್ಯ ಪರಿಷತ್‍ನಿಂದ ನೀಡುವುದಾಗಿ ಭರವಸೆ ನೀಡಿದರು.
ಸಂಸದರ ಆಪ್ತ ನಿವೃತ್ತ ಸಹಾಯಕ ಪಿ.ಮನೋರಾಜ್ ಮಾತನಾಡಿ, ಮಕ್ಕಳಿಗೆ ಪಾಠದ ಜತೆ ಆಟದ ಬಗ್ಗೆ ತಿಳಿಸಿಕೊಡುವ ಕೆಲಸವಾಗಬೇಕು, ಅವರು ಇರುವ ತಾಣವೇ ದೇವಾಲಯ, ಅವರಲ್ಲಿರುವ ಪ್ರತಿಭೆಗಳನ್ನು ಬೇಸಿಗೆಶಿಬಿರಗಳ ಆಯೋಜನೆ ಮಾಡುವ ಮೂಲಕ ಹೊರಹೊಮ್ಮಿ ಸಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಕಳೆದ 5 ವರ್ಷಗಳಿಂದ ಸಮಾನಮನಸ್ಕರ ಜತೆಗೂಡಿ, ಸಂಸ್ಥೆಯಿಂದ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗುತ್ತಿದೆ, ದೇಶಿಕ್ರೀಡೆ, ಚಿತ್ರಕಲೆ, ರಂಗಭೂಮಿಯ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಸಮಾರೋಪ ಸಮಾರಂಭದ ನಂತರ ಕುಬೇರನ ಔತಣಕೂಟ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮನೋರಾಜ್.ಪಿ, ಸ್ವಂತ ಜೋಸಫರ ಮಹಿಳಾ ಅಭಿವೃದ್ಧಿ ಕೇಂದ್ರದ ಆಡಳಿತ ಅಧಿಕಾರಿ ಮರಿಯಾ ಜೋಸ್, ಆತ್ಮೀಯ ಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್.ಎಂ., ಅನಕೊಂಡ ಮಕ್ಕಳ ಬೇಸಿಗೆ ಶಿಬಿರದ ವ್ಯವಸ್ಥಾಪಕ ಶಿವಶಂಕರ್ ಎನ್ ಚೆಟ್ಟು ಆಡುಮ, ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಭಾಗವಹಿಸಿದ್ದರು.