ಬಸವ ಬಳ್ಳಿ ಕೃತಿ ಲೋಕಾರ್ಪಣೆ
ಬೀದರ:ಮೇ.16:ಬಸವಣ್ಣನವರು ತಾವೊಬ್ಬರು ಬೆಳೆಯಲಿಲ್ಲ ತನ್ನೆತ್ತರಕ್ಕೆ 770 ಅಮರ ಗಣಂಗಳನ್ನು ಏರಿಸಿದ ಜಗದ ಏಕೈಕ ಪುರುಷರು ಬಸವಣ್ಣನವರು ಎಂದು ಸುರೇಶ ಚನ್ನಶೆಟ್ಟಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ ಅವರು “ಬಸವ ಬಳ್ಳಿ” ನಿಹರ್ಂಕಾರ ಬಂಡಿರವರ ಸಂಪಾದಿತ ಕೃತಿ ಬೀದರ ತಾಲೂಕಿನ ನಿಜಾಂಪೂರ ಗ್ರಾಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ಹಿಂದುಳಿದ, ಶೋಷಿತ ಸಮಾಜದ ಜನರನ್ನು ಅಪ್ಪಿಕೊಂಡು ಇವನಾರವ ಎನ್ನದೆ ಇವನಮ್ಮವನೆಂದು ಅಮರ ಗಣಂಗಳಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ನಿಜಾಂಪೂರದ ಅನುಸೂಯಮ್ಮಾ ಪಾಟೀಲರ 50ನೇ ಪುಣ್ಯ ಸ್ಮರಣಾರ್ಥ ಅಂಗವಾಗಿ ಅವರ ಮಕ್ಕಳು ಕುಶಾಲಕುಮಾರ ಮತ್ತು ಅನೀಲಕುಮಾರ ಪಾಟೀಲರು ಕೃತಿಗೆ ದಾಸೋಹಿಗಳಾದದ್ದು ಅವಿಸ್ಮರಣಿಯ ಎಂದರು.
ಕೃತಿ ಪರಿಚಯ ಮಾಡುತ್ತಾ ಕವಯಿತ್ರಿ ಶೈಲಜಾ ಹುಡುಗೆ ಅವರು ಮಾತನಾಡುತ್ತಾ “ಬಸವ ಬಳ್ಳಿ” ಕೃತಿಯು ಪುಟ್ಟ ಮಕ್ಕಳಿಂದ ದೊಡ್ಡವರಿಗೆ ಓದಲು ಅನುಕೂಲವಾಗುತ್ತದೆ ಮತ್ತು ಸರಾಗವಾಗಿ 50 ಶಿವ-ಶರಣರ ಪರಿಚಯ 50 ವಚನಗಳು ಕೊಡುತ್ತದೆ ಎಂದು ಹೇಳಿದರು. ನಿಹರ್ಂಕಾರ ಬಂಡಿಯವರು ಏಳು ಗ್ರಂಥಗಳು ಓದಿ 50 ಶರಣರ ಪರಿಚಯ ಆಯ್ಕೆ ಮಾಡಿಕೊಂಡಿದ್ದು ಖುಷಿಯ ಸಂಗತಿ ಎಂದರು.
ಸಮಾರಂಭವನ್ನು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಶ್ರೀಮತಿ ಶಕುಂತಲಾ ಬೆಲ್ದಾಳೆ ರವರು ಉದ್ಛಾಟಿಸಿ ಮಾತನಾಡುತ್ತ, ಪಾಟೀಲ್ ಸಹೋದರರು ತಮ್ಮ ತಾಯಿಯ ಸ್ಮರಣಾರ್ಥ “ಬಸವ ಬಳ್ಳಿ” ಕೃತಿ ಹೊರತರಲು ಸಹಕರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ತಮ್ಮ ತಾಯಿಯ ಹೆಸರು ಸ್ಥಿರಸ್ಥಾಯಿಯಾಗಿ ಉಳಿಸಿದ್ದಾರೆ ಎಂದರು.
ಕೃತಿಯ ಸಂಪಾದಕರಾದ ನಿಹರ್ಂಕಾರ ಬಂಡಿಯವರು ‘ಪಾಪಿಯ ಧನ ಪ್ರಾಯಶ್ಚಿತಕ್ಕೆ’ ಎಂಬ ಬಸವಣ್ಣನವರ ವಚನ ಉಲ್ಲೇಖಿಸಿ ಶಿಕ್ಷಕ-ಕೃಷಿಕ ಸಹೋದದರು ವಚನ ಸಾಹಿತ್ಯ ಪ್ರಸಾರಕ್ಕೆ ತಮ್ಮ ಶುದ್ಧ ಕಾಯಕದ ಹಣ ದಾಸೋಹಗೈದದ್ದು ಸಮಾಜಕ್ಕೆ ಮಾದರಿ ಎಂದರು. ನಾನು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಲು ನನ್ನ ತಾಯಿಯವರಾದ ಕವಯತ್ರಿ ಶ್ರೀಮತಿ ಇಂದುಮತಿ ಬಂಡಿಯವರೇ ಪ್ರೇರಣೆ ಎಂದು ಅನುಭವ ಹಂಚಿಕೊಂಡರು.
ಸಮಾರಂಭವು ವಿಶ್ವನಾಥ ಉದಗೀರೆ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅನೀಲಕುಮಾರ ಪಾಟೀಲರು ಸ್ವಾಗತ ಕೋರಿದರು. ಗುರು ಪೂಜೆಯನ್ನು ಶ್ರೀಮತಿ ಪದ್ಮಾವತಿ ಮತ್ತು ಶ್ರೀ ಕುಶಾಲಕುಮಾರ ಪಾಟೀಲ್ ದಂಪತಿಗಳು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ಶ್ರೀ ಶಿವರಾಜ ಬಿರಾದಾರ ಮರಖಲ್ ವಹಿಸಿ ಮಾತನಾಡುತ್ತ, ಅನುಸೂಯಮ್ಮ ನವರು ಸಾತ್ವೀಕ ಜೀವನದ ಬದುಕು ಸಾಗಿಸಿದ ಬಗ್ಗೆ ಮಾತನಾಡಿದರು. ಅವರ ಸ್ಮರಣಾರ್ಥ “ಬಸವ ಬಳ್ಳಿ” ಅನುಸೂಯಾ ಪ್ರಕಾಶನದ ಮೂಲಕ ಪ್ರಕಟಿಸಿದ ಪಾಟೀಲ್ ಕುಟುಂಬವು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ನಿರ್ವಹಣೆ ಶ್ರೀ ಆನಂದ ಪಾಟೀಲ್ ಕೋಳಾರ (ಕೆ) ನಡೆಸಿ ಕೊಟ್ಟರೆ, ಶ್ರೀ ಲಿಂಗರಾವ ಪಾಟೀಲ್ ನಿಜಾಂಪೂರ ವಂದಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಶಾಂತ ಶರಗಾರ, ಅಧ್ಯಕ್ಷರು ಗ್ರಾಮ ಪಂಚಾಯತ ಕೋಳಾರ (ಕೆ), ಗುರುನಾಥ ಬಿರಾದಾರ, ಉಪಾಧ್ಯಕ್ಷರುಕ ಗ್ರಾಮ ಪಂಚಾಯತ ಕೋಳಾರ (ಕೆ), ಶ್ರೀ ಸಂಗಶೆಟ್ಟಿ ಬಿರಾದಾರ, ಅಧ್ಯಕ್ಷರು, ಶ್ರೀ ಬಸವೇಶ್ವರ ಟ್ರಸ್ಟ್ ನಿಜಾಂಪೂರ, ಗೌರವ ಉಪಸ್ಥಿತಿಗಳಾಗಿ ಡಾ|| ಸತೀಶ ಪರತಾಪೂರ, ಪ್ರಾಚಾರ್ಯರರು ಶ್ರೀ ಶರಣಬಸವ ಪಬ್ಲಿಕ್ ಸ್ಕೂಲ್ ಗೋರನಳ್ಳಿ-ಬೀದರ ಹಾಗೂ ಶಿವಶಂಕರ ಟೋಕರೆ ವೇದಿಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಚನ್ನಪ್ಪಾ ಸಂಗೋಳಗಿ, ಸೋಮಶೇಖರ ನೀಲಪ್ಪನೋರ್, ಶಿವಾನಂದ ಅಟ್ಟೂರ, ಮಲ್ಲಿಕಾರ್ಜುನ್ ಚೌಳಿ, ಓಂಕಾರ ಉಪ್ಪೆ, ಗುಂಡಪ್ಪಾ ಹುಡಗೆ, ಶ್ರೀಮತಿ ಭಾವನಾ ಕಲಬುರಗಿ, ಶ್ರೀಮತಿ ನೀಲಗಂಗಾ ಬಂಡಿ, ಶ್ರೀಮತಿ ಪರಮೇಶ್ವರಿ ಪಾಟೀಲ್, ಶ್ರೀಮತಿ ಅನುರಾಧಾ ನೀಲಪ್ಪನೋರ್, ಸಪ್ನಾ ಬಿರಾದಾರ, ದೇವೆಂದ್ರ ನಾವದಗೇರಿ, ಬಸವಕಿರಣ ಬಂಡಿ, ಚಂದ್ರಶೇಖರ ಪಸಾರ ನಿರ್ಣಾ, ಸೂರ್ಯಕಾಂತ ಸೇಡಂ ಹಾಗೂ ಗ್ರಾಮದ ಹಿರಿಯರು, ಮಕ್ಕಳು ಸಮಾರಂಭದಲ್ಲಿ ಭಾಗವಹಿಸಿದ್ದರು.