ಕೊಟ್ಟಲಗಿಯ ಸಿದ್ಧೇಶ್ವರ ದೇವರ ಆರಾಧನಾ ಮಹೋತ್ಸವ ಮಂಗಲ
ಕಲಬುರಗಿ,ಮೇ.15-ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿಯಲ್ಲಿ ಸೋಮವಾರ ಮೇ.13 ರಂದು ಪ್ರಾರಂಭವಾದ ಸಿದ್ಧೇಶ್ವರ ದೇವರ ಆರಾಧನಾ ಮಹೋತ್ಸವದ ಎರಡನೆ ದಿನವಾದ ಮಂಗಳವಾರ ಸಾಯಂಕಾಲದ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಇಂಚಗೇರಿ ಮಠದ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಕೊಟ್ಟಲಗಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು. ಬುಧವಾರ ಬೆಳಿಗ್ಗೆ ಆರಾಧನಾ ಮಹೋತ್ಸವ ಪುಷ್ಪವೃಷ್ಠಿಯೊಂದಿಗೆ ಮಂಗಲಗೊಂಡಿತು.