ವಧು-ವರರ ಮಾಹಿತಿ ಕೇಂದ್ರದಲ್ಲಿ ಭಗೀರಥ ಜಯಂತಿ ಆಚರಣೆ
ತಾಳಿಕೋಟೆ:ಮೇ.15: ಪಟ್ಟಣದ ಶ್ರೀ ಭಗೀರಥ ಸರ್ವ ಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದಲ್ಲಿ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಅವರ ಜಯಂತ್ಯೋತ್ಸವವನ್ನು ಭಕ್ತಿ ಭಾವದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಭಗೀರಥರ ಭಾವಚಿತ್ರಕ್ಕೆ ಕೇಂದ್ರದ ಕಾರ್ಯದರ್ಶಿ ಸುನೀಲಕುಮಾರ ಯರಕ್ಯಾಳ ಅವರು ಮಹಾ ಪೂಜೆ ಸಲ್ಲಿಸಿದರು.
ಕೇಂದ್ರದ ಕಾರ್ಯದರ್ಶಿ ಸುನೀಲಕುಮಾರ ಯರಕ್ಯಾಳ ಅವರು ಮಾತನಾಡಿ ಪುರಾಣದಲ್ಲಿ ಭಗೀರಥ ಕಥೆಗೆ ವಿಶೇಷ ಪ್ರಾಮುಖ್ಯತೆಂಟು. ರಾಜ ಋಷಿ ಕಠಿಣ ತಪಸ್ಸನ್ನು ಮಾಡಿ ಗಂಗೆಯನ್ನು ದೇವಲೋಕದಿಂದ ಭೂಲೋಕಕ್ಕೆ ತಂದ ಧೀರ, ಸಕಲ ಜೀವರಾಸಿಗಳಿಗೆ ನೀರಿನ ದಾಹವನ್ನು ತೀರಿಸಿರುವಂತಹ ಶ್ರೇಷ್ಠ ಸಂತ ಮಹಾನ ಮಾನವತಾವಾದಿ ಭಗೀರಥ ಮಹರ್ಷಿಯಾಗಿದ್ದಾರೆ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸಿದ ಮಹಾನ್ ಮೇದಾವಿ ಎಂದು ಹೇಳಿದರು.
ಕೇಂದ್ರದ ಅಧ್ಯಕ್ಷರಾದ ಬಸಯ್ಯ ಹಿರೇಮಠ ಮಾತನಾಡಿ ಶ್ರೀ ಭಗೀರಥ ಮಹರ್ಷಿಗಳು ಬಹುದೊಡ್ಡ ಮಹಾರಾಜ ಅವನಿಗೆ ಸಕಲ ವೈಭವಗಳಿದ್ದರು ಒಂದು ಕೊರಗಿತ್ತು. ಅವರ ತಂದೆ ಮತ್ತು ತಾತಂದಿರು ದೇವಗಂಗೆಯನ್ನು ಪಡೆಯಬೇಕು ಎಂದು ಆಸೆ ಪಡತ್ತ ಅದು ಈಡೇರದೆ ಜೀವವನ್ನು ಬಿಟ್ಟಿದ್ದರು ಹೇಗಾದರೂ ಮಾಡಿ ನಾನಾದರೂ ದೇವಗಂಗೆಯನ್ನು ಪಡೆದುಕೋಳ್ಳಬೇಕು. ಎಂದು ಭಗೀರಥ ಪ್ರತಿಜ್ಞೆ ಮಾಡಿದ, ಘೋರವಾದ ತಪಸ್ಸು ಮಾಡಿ ಅವರನ ತಪಸ್ಸಿಗೆ ಮೆಚ್ಚಿ ಗಂಗಾಮಾತೆ ಆಕಾಶದಿಂದ ಭೂವಿಗೆ ಧುಮಕಿ ಬಂದಳು ಂತಹ ತಪಸ್ವಿಯನ್ನು ನಿತ್ಯ ನೆನೆಯುವಂತಹ ಪೂಜಿಸುವಂತಹ ಕಾರ್ಯ ನಾವು ನಿವೇಲ್ಲರೂ ಮಾಡಬೇಕಾಗಿದೆ ಎಂದರು.
ಕೇಂದ್ರದ ಸಂಚಾಯಕರಾದ ವಿ.ಜಿ. ಗಣಾಚಾರಿ ಭಗೀರಥ ಮಹರ್ಷಿಯ ಜೀವನದ ಚೇರಿತ್ರೆ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಾಯಿಬಣ್ಣ ಕಟ್ಟಿಮನಿ, ಸಿದ್ಧಣ್ಣ ಬಸರಿಕಟ್ಟಿ, ಪೀರಅಹ್ಮದ ಖಾಜಿ, ಪಕಾಶ ಬಬಲೇಶ್ವರ, ಜೇತುನ ನದಾಫ್, ಮೊದಲಾದವರು ಇದ್ದರು.
ಕಾರ್ಯದರ್ಶಿ ಸುನೀಲ ಕುಮಾರ ಯರಕ್ಕಾಳ ನಿರೂಪಿಸಿದರು, ಪಕಾಶ ಬಬಲೇಶ್ವ ವಂದಿಸಿದರು