ಕನ್ನಡ ನಾಡಿಗೆ ಡಾ.ಚನ್ನವೀರ ಶಿವಾಚಾರ್ಯರ ಕೊಡುಗೆ ಅಪಾರ: ಡಾ.ಗವಿಸಿದ್ಧಪ್ಪ ಬಣ್ಣನೆ
ಬೀದರ್:ಮೇ.15: ಕಲ್ಯಾಣ ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡಿ ಕನ್ನಡ ನಾಡಿಗೆ ಹಾರಕೂಡದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರ ಸಾಮಾಜಿಕ, ಸಾಹಿತ್ಯಿಕ ಧಾರ್ಮಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕøತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರವೆಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಬಣ್ಣಿಸಿದರು.
ಬಸವಕಲ್ಯಾಣ ತಾಲೂಕಿನ ಹಾರಕೂಡ ಹಿರೇಮಠದಲ್ಲಿ ಸುಭಾಶ್ಚಂದ್ರ ಕಶೆಟ್ಟಿಯವರು ಬರೆದ ನಡೆದಾಡುವ ದೇವರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಮಠದ ಪರಂಪರೆಯ ಜೊತೆಗೆ ಡಾ.ಚನ್ನವೀರ ಶಿವಾಚಾರ್ಯರ ದಾಸೋಹ, ಬಾಲ್ಯ, ಶಿಕ್ಷಣ, ಪಟ್ಟಾಧಿಕಾರ, ಅವರಿಗೆ ಬಂದ ಪ್ರಶಸ್ತಿ, ಮಠದಿಂದ ನೀಡುವ ಪ್ರಶಸ್ತಿ, ಮಠ ಪ್ರಕಟಿಸಿ ಪುಸ್ತಕಗಳ ವಿವರ ತುಂಬಾ ಸರಳವಾಗಿ ಜನ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಚಿತ್ರಿಸಿದ ಲೇಖಕ ಕಶೆಟ್ಟಿ ಅವರು ಕಾರ್ಯ ಮೆಚ್ಚಬೇಕು.
ಇಳಿವಯಸ್ಸಿ ನಲ್ಲೂ ಅವರು ಬರೆದ ರೀತಿ ನಮಗೆ ಆಶ್ಚರ್ಯ ಹುಟ್ಟಿಸಿದೆ.
ಶ್ರೀಗಳ ಮೇಲೆ ಬೆಳಕು ಚೆಲ್ಲುವ ಆಕರ ಗ್ರಂಥವೆಂದರು.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಮಾತನಾಡಿ ನನಗೆ ಶರಣರು, ಸಂತರ ಬಗ್ಗೆ ಅಪಾರ ನಂಬುಗೆ, ಹಾರಕೂಡ ಶ್ರೀಗಳ ಕುರಿತು ನನಗೆ ತಿಳಿದ ವಿಚಾರಗಳನ್ನು ಮನಃ ಪೂರ್ವಕ ಚಿತ್ರಿಸಿದ್ದೇನೆ.
ಶ್ರೀಗಳ ಸಾಧನೆ ಸಮುದ್ರ, ಅದರೊಳಗಿನ ಬೊಗಸೆ ಮಾತ್ರ ಸಾಹಿತ್ಯದ ಮೂಲಕ ಹಿಡಿದಿಟ್ಟಿರುವೆ ಎಂದರು.
ಸಿದ್ಧಲಿಂಗೇಶ್ವರ ಪ್ರಕಾಶನದ ಪುಸ್ತಕೋದ್ಯಮಿ ಬಸವರಾಜ ಕೊನೇಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಡಿ ಕಲ್ಯಾಣ ಕರ್ನಾಟಕದಲ್ಲಿ ಇಂತಹ ಅಪರೂಪದ ಜಾತ್ಯಾತೀತ ಸ್ವಾಮಿಗಳನ್ನು ನಾನು ಕಂಡಿಲ್ಲ.
ಜೊತೆಗೆ ಶ್ರೀಗಳ ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ನಾಡಿಗೆ ಸಂದಿದೆ.
ಕಶೆಟ್ಟಿಯವರು ಕೃತಿ ರಚಿಸಿದಾಗ ನಮ್ಮ ಪ್ರಕಾಶನ ದಿಂದ ಪ್ರಕಟಿಸಿದ್ದು ನನಗೆ ಸಂತಸ ತಂದಿದೆ ಎಂದರು.
ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಕಾರ್ತೀಕ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು.
ಸಾಹಿತಿ ಡಾ.ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಬುರಗಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಸುನೀಲ ಜಾಬಾದಿ ನಿರೂಪಿ ಸಿದರು.
ಶಹಬಾದ ಸರಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಡಾ.ಚಿದಾನಂದ ಕುಡ್ಡನ್ ವಂದಿಸಿದರು.
ಪ್ರಕಾಶಕ ಸಿದ್ದಲಿಂಗ ಕೊನೇಕ್, ಉದ್ಯಮಿ ಶಿವಾನಂದ ಕಶೆಟ್ಟಿ, ಮಲ್ಲಿನಾಥ ಹಿರೇಮಠ, ಅಪ್ಪಣ್ಣ ಜನವಾಡ, ಚನ್ನಬಸಪ್ಪ ಕನಕಪೂರ ಮತ್ತಿತರರು ಉಪಸ್ಥಿತರಿದ್ದರು.