ಭಗೀರಥ ಜಯಂತಿ ಆಚರಣೆ
ಬೀದರ್:ಮೇ.15: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಗೀರಥ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ಧರಾಮೇಶ್ವರ ಅವರು ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ತಾನಾಜಿ ಸಗರ, ಮುಖಂಡರಾದ ಜಗನ್ನಾಥ ಎಚ್. ಉಪ್ಪಾರ, ಸಂತೋಷ ರೆಬಲೆ, ಸುನೀಲ್ ಉಪ್ಪಾರ, ಸಾಗರ ಕೊಳ್ಳೂರ, ಶಿವಾಜಿ ಸಗರ, ಬಾಬುರಾವ್ ಸಗರ, ಜಗನ್ನಾಥ ಅಲಗೊಲ, ಬಸವರಾಜ ಬೆಳ್ಳೂರೆ, ಮನೋಹರ ಉಪ್ಪಾರ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.